ಮಂಗಳೂರು ಚಲೋ ಬೈಕ್ ರ್ಯಾಲಿಗೂ ಮುನ್ನವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

0
28
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: 5 ಬಿಜೆಪಿಯಿಂದ ಮಂಗಳೂರು ಚಲೋ ಬೈಕ್ ರ‌್ಯಾಲಿ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ನಗರದ
ನಗರದ ರಾಣಿ ಚನ್ನಮ್ಮ ವೃತದಲ್ಲಿ ಬಿಜೆಪಿ ಬೆಳಗಾವಿ ನಗರ ಅಧ್ಯಕ್ಷ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆ‌ ರ್ಯಾಲಿ ನಡೆಸುವ ಮುನ್ನವೆ ಪೊಲೀಸರು ಬಂಧಿಸಿದರು.

ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಾಗೂ ಪೊಲೀಸರ ನಡುವೆ ಮಾತಿನ‌ ಚಕಮತಕಿ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ‌ ಸಂಜಯ, ಹಿಂದು ಮುಖಂಡರ ಕಾರ್ಯಕರ್ತರ ಕೊಲೆ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರ್ಯಾಲಿ ನಡೆಸುತ್ತಿದೆ. ಆದರೆ ಪೊಲೀಸರು ರ್ಯಾಲಿಗೆ ತೆರಳುವ ಮುನ್ನವೆ ಕಾರ್ಯಕರ್ತರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ರಾಜ್ಯ ಸರಕಾರದ‌ ವಿರುದ್ಧ ಹರಿಹಾಯ್ದರು.

ಬಸ್ ಮೂಲಕ ಬಿಜೆಪಿ ಮುಖಂಡರಾದ ರಾಜೇಂದ್ರ ಹರಕುಣಿ, ರಾಜಕುಮಾರ ಟೋಪಣ್ಣವರ, ಅಭಯ ಅವಲಕ್ಕಿ‌ಸೇರಿದಂತೆ ಮೊದಲಾದವರನ್ನು ಪೊಲೀಸರು ಕರೆದೊಯ್ದುರು.

loading...