ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜೀವನ ಆಗಲಿದೆ ಸಿನಿಮಾ

0
24
loading...

ತೆರೆ ಮೇಲೆ ಈಗಾಗಲೇ ಅನೇಕ ಕ್ರೀಡಾಪಟುಗಳ ಸಿನಿಮಾ ಬಂದಿದೆ. ಇದೀಗ ಮತ್ತೆ ಹೊಸ ಸೇರ್ಪಡೆಯಂತೆ ಮಿಥಾಲಿ ರಾಜ್ ಅವರ ಜೀವನಚರಿತ್ರೆ ಸಿನಿಮಾ ರೂಪವನ್ನು ಪಡೆದುಕೊಳ್ಳುತ್ತಿದೆ. ಮಿಥಾಲಿ ರಾಜ್ ಭಾರತ ಮಹಿಳಾ ಕ್ರಿಕೆಟ್ ನಾಯಕಿ. ಇವರ ನಾಯಕತ್ವದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ದೊಡ್ಡ ಯಶಸ್ಸು ಕಂಡಿದೆ. ಜೊತೆಗೆ ಈ ಬಾರಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವನ್ನು ಫೈನಲ್ ತಲುಪಿಸಿದ ಕೀರ್ತಿ ಮಿಥಾಲಿ ರಾಜ್ ಅವರಿಗೆ ಸಲ್ಲುತ್ತದೆ.
ಸದ್ಯ ವೈಕಾಮ್ 18 ಪಿಕ್ಚರ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ತೆರೆ ಮೇಲೆ ಮಿಥಾಲಿ ರಾಜ್ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುವುದು ಇನ್ನು ಖಚಿತಪಡಿಸಿಲ್ಲ.

loading...