ಯೋಗ ಋಷಿ ಬಾಬಾ ರಾಮದೇವಗೆ ರೇಣುಕ ಪ್ರಶಸ್ತಿ

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಅಂತರಾಷ್ಟ್ರೀಯ ಯೋಗ ಋಷಿ ಬಾಬಾ ರಾಮದೇವ ಅವರಿಗೆ ರೇಣುಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ. ನಾಡಿನ ನೂರಾರು ಹರ, ಚರ ಮೂರ್ತಿ ಶ್ರೀಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಹಾಗೂ ಮಠದ ಪೀಠಾಧ್ಯಕ್ಷ ಚಂದ್ರಶೇಖರ ಶ್ರೀಗಳ ರಜತ ಪೀಠಾರೋಹಣ ಸಮಾರಂಭ ದಸರಾ ಮಹೋತ್ಸವ ಅಂಗವಾಗಿ ನೀಡುವ ರೇಣುಕ ಶ್ರೀ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಸಂಭ್ರಮದಿಂದ ಜರುಗುತ್ತಿದೆ.
ಮುಗಳಖೋಡದ ಮುರಗರಾಜೇಂದ್ರ ಶ್ರೀಗಳು, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಶ್ರೀಗಳು. ಕಟಕೋಳದ ವೀರಭದ್ರ ಶ್ರೀಗಳು, ಮುರಗೋಡದ ನೀಲಕಂಠ ಶ್ರೀಗಳು ರಾಜ್ಯದ ವಿವಿಧ ಹರ ಚರಮೂರ್ತಿ ಶ್ರೀಗಳು, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಬೀದರನ ಸಂಸದ ಭಗವಂತ ಖೋಬಾ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಮಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿ.

loading...