ರೈತರ ಆಸೆಗೆ ಕಾಂಗ್ರೆಸ್‍ನಿಂದ ತಣ್ಣೀರು: ಶಾಸಕ ದೊಡ್ಡನಗೌಡ

0
35
loading...

ಕುಷ್ಟಗಿ: ಸತತ ಬರಗಾಲದಿಂದ ತತ್ತರಿಸುತ್ತಿರುವ ಕೊಪ್ಪಳ ಜಿಲ್ಲೆಯ ರೈತರಿಗೆ ಅದರಲ್ಲೂ ಕುಷ್ಟಗಿ ಯಲಬುರ್ಗಾ ತಾಲೂಕಿನ ರೈತರು ಕೃಷ್ಣ ಬಿ ಸ್ಕೀಂನಿಂದ ತಮ್ಮ ರೈತಾಪಿ ಜೀವನದ ಹೊಂಗನಸು ಕಾಣುತ್ತಿದ್ದ ರೈತರ ಆಸೆಗೆ ಕಾಂಗ್ರೆಸ್ ಸರಕಾರ ತಣ್ಣೀರು ಎರಚಿ ಕೈ ತೊಳೆದುಕೊಂಡಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನದಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಬಿ ಸ್ಕೀಂ ಹೋರಾಟ ಸಮಾರಂಭದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಕೃಷ್ಣಾ ಬಿ ಸ್ಕೀಂ ಗೆ ಪ್ರತಿ ವರ್ಷ 10ಸಾವಿರ ಕೋಟಿ ನೀಡುವುದಾಗಿ ಹೇಳಿ ನಮ್ಮ ರೈತರನ್ನು ಓಲೈಸಿ ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ರೈತರ ಹಿತ ಕಾಪಾಡುವದನ್ನು ಮರೆತು ನಿದ್ದೆಯಲ್ಲಿದ್ದಾರೆ. ನೀರಾವರಿ ಸಚಿವ ಎಂ.ಬಿ ಪಾಟೀಲರು ಸಹ ಆಸಕ್ತಿಯನ್ನು ತೋರದೇ ನಮ್ಮ ರೈತರನ್ನು ಕಡೆಗಣಿಸುತ್ತಿದ್ದಾರೆ. 3 ವರ್ಷದಿಂದ ಯಾವುದೇ ಸಭೆಯನ್ನು ಮಾಡದೇ ನಿರ್ಲಕ್ಷ ತೋರುತ್ತಿದ್ದಾರೆ. ಇನ್ನೇನು ಸರಕಾರ ಅವಧಿ ಮುಗಿಯಲು ಬಂದರೂ ನೈಯಾ ಪೈಸೆಯನ್ನು ಸಹ ನೀಡದೇ ತಮ್ಮ ನಿರಾಸಕ್ತಿ ತೋರಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರುಗಳಾದ ನೇಮಣ್ಣ ಮೇಲಸಕ್ರಿ, ವಿಜಯ ನಾಯಕ, ಕೆ. ಮಹೇಶ, ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಎ.ಪಿ.ಎಮ್.ಸಿ ಅಧ್ಯಕ್ಷ ಬಾಲಪ್ಪ ಚಾಕರಿ, ಶಶಿಧರ ಕವಲಿ, ವೀರೇಶ ನಾಯಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶರಣು ತಳ್ಳಿಕೇರಿ ಸೇರಿದಂತೆ

loading...