ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ನೀಡುವಂತೆ ಬೃಹತ್ ಪ್ರತಿಭಟನೆ

0
31
loading...

ಕುಷ್ಟಗಿ,ಸೆ.18: ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ವಾಲ್ಮೀಕಿ ನಾಯಕ ಸಮಾಜವು ತನ್ನದೆ ಆದ ಐತಿಹಾಸಿಕ ಪರಂಪರೆ ಹೋಂದಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ವಾಲ್ಮೀ ನಾಯಕ ಸಮುದಾಯಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ಸೌಲಭ್ಯ ನೀಡುವಂತೆ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಎಂ. ಗಂಗಪ್ಪ ಅವರಿಗೆ ಮನವಿ ನೀಡಿದರು.
ವಾಲ್ಮೀಕಿ ಭವನದಿಂದ ಸಾವರಾರು ಜನರು ಪ್ರತಿಭಟನೆ ಮಾಡುತ್ತ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ನಂತರ ತಹಶೀಲ ಕಛೇರಿಗೆ ತೆರಳಿ ಮನಮವಿ ನೀಡಿದರು. ಈ ಸಂದರ್ಭದಲ್ಲಿ ರಜ್ಯ ಮಹಿಳಾ ಆಯೋಗದ ಸದಸ್ಯೆ ಮಾಲತಿ ನಾಯಕ ಮಾತನಾಡುತ್ತ ಈ ನಾಡಿನಲ್ಲಿ ವಾಲ್ಮೀಕಿ ಸಮುದಾಯ ತನ್ನದೆಯಾದ ಪರಂಪರೆ ಹೊಂದಿದೆ. ನಮ್ಮ ಹಕ್ಕುಗಳನ್ನು ನಮಗೆ ಬಿಟ್ಟು ಬೆರೆಯಾರಿಗು ನೀಡಬಾರದು. ಕೆವು ಪ್ರಭಾವಿ ವ್ಯಕ್ತಿಗಳು ನಮ್ಮ ಸಮುಧಾಯದ ಮೀಸಲಾತಿಯಡಿಯಲ್ಲಿ ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ ಅಧಿಕಾರ ಪಡೆದು ನಮ್ಮಗಳಿಗೆ ಅನ್ಯಾಯ ಮಾಡಿದ್ದಾರೆ. ಅಂತವರ ವಿರುದ್ದು ಸಿ.ಬಿ.ಐ ತನಿಕೆಗೆ ಓಳಪಡಿಸಬೇಕು. ಮತ್ತು ನಮ್ಮ ಸಮುದಾಯಕ್ಕೆ ಕೆಂದ್ರ ಸರಕಾರ 7.5 ಮೀಸಲಾತಿ ನೀಡಿದೆ ಅದರಂತೆ ರಾಜ್ಯ ಸರಕಾರವು ಶೇಕಡ 7.5 ನೀಡಬೇಕು. ಇಂತಹ ಹಿಂದುಳಿದ ಜನಂಗಗಳನ್ನು ಮೆಲೆತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಬಸವರಾಜ ಎ.ಂ. ನಾಯಕ, ಭಾರತಿ ನೀರಲಗೇರಿ, ಮಾತನಾಡಿದರು,
ಈ ವೇಳೆ ತಾಲೂಕಾ ಪಂಚಾಯತ ಸದಸ್ಯ ಭೀಮಣ್ಣ ತಲೇಖಾನ, ಮಹೇಶ್ ಕೋನಸಾಗರ, ಮರಿಯಪ್ಪ ಗೊತಗಿ, ರಮೇಶ ಕೊಳ್ಳಿ, ಪರಸನಗೌಡ ಪಾಟೀಲ, ಸಂಗಣ್ಣ ಕೊರಡಕೇರ, ಕಂದಕೂರಪ್ಪ ವಾಲ್ಮೀಕಿ, ಚಂದಪ್ಪ ತಳವಾರ, ಮನುಂತಪ್ಪ, ವೀರಪ್ಪ ನಾಯಕ, ಶಿವು ಹÀಜಾಳ, ಶರಣಪ್ಪ ವಾಲ್ಮೀಕಿ, ಹಾಗೂ ಸಾವಿರಾರು ಜನ ಭಾಗವಿಸಿದ್ದರು.

loading...