ವಿರಶೈವ-ಲಿಂಗಾಯತ ಧರ್ಮದ ಹಗ್ಗಜಗ್ಗಾಟ ಬಗೆಹರೆಯುವ ಲಕ್ಷಣ ಕಾಣುತ್ತಿಲ್ಲ

0
90
loading...

ಬೈಲಹೊಂಗಲ: ಸಿಂಧೂ ನಾಗರಿಕತೆಯಲ್ಲಿ ಪೂಜಾಗೃಹಗಳು ಮತ್ತು ಅದರಲ್ಲಿ ಲಿಂಗಗಳು ದೊರೆತಿರುವದನ್ನು ಸಂಶೋಧನೆಗಾರರು ಸಮಾಜಕ್ಕೆ ತಿಳಿಸಿದಾಗಲು ವಿರಶೈವ-ಲಿಂಗಾಯತ ಧರ್ಮವನ್ನು ಪಂಚಾಚಾರ್ಯರು ಸ್ಥಾಪಿಸಿದರು ಎಂದು ಕೆಲವರು ಪ್ರತಿಪಾದಿಸಿದರೆ ಕೆಲವರು 12ನೇ ಶತಮಾನದಲ್ಲಿ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂಬ ಗೊಂದಲಗಳಿಂದ ವಿರಶೈವ-ಲಿಂಗಾಯತ ಧರ್ಮದ ಹಗ್ಗಜಗ್ಗಾಟ ಬಗೆಹರೆಯುವ ಲಕ್ಷಣಗಳು ಕ್ಷಿಣಿಸುತ್ತಿವೆ ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಪೂಜ್ಯರು ಕಳವಳ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಶಿವಮಂದಿರದಲ್ಲಿ ಸೆ.4ರಂದು ನಡೆಯಲಿರುವ ವಿರಶೈವ-ಲಿಂಗಾಯತ ಧರ್ಮ ಸಂಘಟನೆಗಾಗಿ ಸಾವಿರಕ್ಕು ಹೆಚ್ಚು ಗುರು-ವಿರಕ್ತ ಸ್ವಾಮಿಜಿಗಳು ಮತ್ತು ಲಕ್ಷಾಂತರ ಭಕ್ತರ ಸದ್ಬಾವನಾ ಸಮ್ಮೇಳನದ ಪೂರ್ವಭಾವಿಯಾಗಿ ಪಟ್ಟಣದ ಶಾಖಾ ಮುರುಸಾವಿರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡಿ ವಿರಶೈವ-ಲಿಂಗಯತ ಧರ್ಮ ಬೆರೆ ಬೆರಯಲ್ಲ ಸಾವಿರಾರು ವರ್ಷಗಳ ಇತಿಹಾಸವಿರುವ ಈ ಧರ್ಮ ಒಡೆಯುವದು ಸರಿಯಲ್ಲ. ಆಧ್ದರಿಂದ ಪ್ರತಿಯೊಬ್ಬರು ಇದನ್ನರಿತು ಗುರು-ವಿರಕ್ತರು ಮತ್ತು ಪಂಚಪೀಠಗಳು ಒಂದಾದಲ್ಲಿ ಸಮಾಜ ಒಳ್ಳೆಯ ದಾರಿಯನ್ನು ಹಿಡಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಭು ನೀಲಕಂಠ ಸ್ವಾಮಿಜಿ, ಮುತ್ನಾಳದ ಪೂಜ್ಯರು ದೊಡವಾಡದ ಜಡಿಸಿದ್ದೇಶ್ವರ ಶ್ರೀಗಳು, ಬೈಲಹೊಂಗಲದ ಗುರುಮಡಿವಾಳೇಶ್ವರ ಶ್ರೀಗಳು ವೇ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಇದ್ದರು.

loading...