ಶಾದಿಭಾಗ್ಯ ಫಲಾನುಭವಿಗಳಿಗೆ ಸಚಿವರಿಂದ ಮಂಜೂರಾತಿ ಪತ್ರ ವಿತರಣೆ

0
19
loading...

ಹಾವೇರಿ:ಶಾದಿಭಾಗ್ಯ ಯೋಜನೆಯಡಿ ಪ್ರೋತ್ಸಾಹಧನ ಮಂಜೂರಾದ ಹಾವೇರಿ ತಾಲೂಕಿನ 82 ಫಲಾನುಭವಿಗಳಿಗೆ ಜವಳಿ, ಮುಜರಾಯಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಅವರು ಮಂಜೂರಾತಿ ಪತ್ರ ವಿತರಿಸಿದರು. ಹಾವೇರಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಹಾಗೂ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸನ್ಮಾನಿಸಿ ಮಾತನಾಡಿದ  ಸಚಿವರು, ಶಾದಿಭಾಗ್ಯ ಯೋಜನೆಯಡಿ ಮಂಜೂರಾದ ಹಣ ಇನ್ನೊಂದು ವಾರದೊಳಗೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗಲಿದೆ ಎಂದು ಹೇಳಿದರು. ಶೀಘ್ರವೇ ವಸತಿ ರಹಿತ ಬಡವರಿಗೆ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ವಿವಿಧ ಮುಖಂಡರು ಉಪಸ್ಥಿತರಿದ್ದರು.

loading...