ಶಿಕ್ಷಣಕ್ಕೆ ಮಹತ್ವ ನೀಡಿ

0
32
loading...

ಗೋಕಾಕ: ವರ್ಣಾಶ್ರಮವನ್ನು ಸಮಾಜದಿಂದ ಓಡಿಸಲು ಶ್ರಮಿಸಿ ಶಿಕ್ಷಣಕ್ಕೆ ಮಹತ್ವ ನೀಡಿ, ಮನುಕುಲ ಒಂದೇ ಎಂಬ ಸಂದೇಶವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ್ದಾರೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಹೇಳಿದರು.
ಅವರು, ಬುಧವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕøತ ಇಲಾಖೆ, ತಾಲೂಕಾಡಳಿತ, ತಾಲೂಕು ಪಂಚಾಯತ್ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಉತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಸಮಾಜ ಬಾಂಧವರು ಕಾಯಕ ಜೀವಿಗಳಾಗಿ ಬಿದ್ದವರನ್ನು ಮೇಲೆತ್ತುವ ಕಾರ್ಯ ಮಾಡಬೇಕು. ಗುರುಗಳ ಆದರ್ಶವನ್ನು ಪಾಲಿಸುವದರೊಂದಿಗೆ ಎಲ್ಲರೂ ಸಂಘಟಿತರಾಗಿ ಶಿಕ್ಷಣಕ್ಕೆ ಮಹತ್ವ ನೀಡಿ ಸಮಾಜ ಅಭಿವೃದ್ಧಿಪಡಿಸಿದರೆ ಇಂತಹ ಜಯಂತಿಗಳನ್ನು ಆಚರಿಸುವುದು ಸಾರ್ಥಕವಾಗುತ್ತದೆ ಎಂದರು.
ಸಮಾಜದ ಮುಖಂಡ ಗಣಪತಿ ಈಳಿಗೇರ ಮಾತನಾಡಿ, ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಿ ಬದುಕನ್ನು ಸಾರ್ಥಕಪಡಿಸಿಕೊಳ್ಳುವಂತೆ ಕರೆ ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಅರಭಾಂವಿಯ ಕಿತ್ತೂರ ರಾಣಿ ಚಎನ್ನಮ್ಮಾ ತೋಟಗಾರಿಕಾ ಮಹಾವಿದ್ಯಾಲಯದ ಪ್ರೊ. ನಾಗೇಶ ನಾಯಿಕ ಅವರು ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ತಹಶೀಲ್ದಾರ ಜಿ.ಎಸ್.ಮಳಗಿ ವಹಿಸಿದ್ದರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನ್ನವರ, ಆರ್ಯ ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಈಳಿಗೇರ, ತಾಲೂಕಾಧ್ಯಕ್ಷ ವಜ್ರಕಾಂತ ಈಳಿಗೇರ, ನಗರಸಭೆ ಸದಸ್ಯ ಚಂದ್ರಕಾಂತ ಈಳಿಗೇರ, ಸಮಾಜದ ಮುಖಂಡರಾದ ನಿಂಗಪ್ಪಾ ಈಳಿಗೇರ, ದೇವೆಂದ್ರ ಈಳಿಗೇರ, ಯಲ್ಲಪ್ಪಾ ಈಳಿಗೇರ, ಮಾರುತಿ ಈಳಿಗೇರ, ಮುತ್ತೆಪ್ಪಾ ಈಳಿಗೇರ, ತಾಲೂಕಾ ಅಧಿಕಾರಿಗಳಾದ ಎ.ಬಿ.ಹೊನ್ನಾವರ, ಎಸ್.ವಿ.ಕಲ್ಲಪ್ಪನವರ, ಎ.ಡಿ.ಸವದತ್ತಿ ಇದ್ದರು.

loading...