ಶಿಕ್ಷಣ ಸಂಸ್ಥೆಗಳು ಶಿಕ್ಷಣಕ್ಕೆ ಮಹತ್ವ : ಕೋರೆ

0
31
loading...

ಕನ್ನಡಮ್ಮ ಸುದ್ದಿ

ಬೆಳಗಾವಿ : ಕೆಎಲ್ ಇ ಸಂಸ್ಥೆಯ ಜೆಎನ್ ಎಂಸಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ವಚ್ಚತಾ ಹಾಗೂ ಹಸಿರುಕರಿಣದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಪ್ರಶಸ್ತಿ ನೀಡಿರುವುದು ಬೆಳಗಾವಿ ಹೆಸರು ದೇಶದಲ್ಲಿ ಪ್ರಚಲಿತವಾಗಿದೆ ಎಂದು ಸಂಸ್ಥೆಯ ಕಾರ್ಯಾದ್ಯಕ್ಷ, ರಾಜಸಭಾ ಸದಸ್ಯ ಡಾ. ಪ್ರಭಾಕರ ಕೋರೆ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ 2000 ಕ್ಯಾಂಪಸ್, ಕಾಲೇಜು, ವಿಶ್ವವಿದ್ಯಾಲಯಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು, ಅದರಲ್ಲಿ 174 ಸಂಸ್ಥೆಗಳನ್ನು ಆಯ್ಕೆ ಮಾಡಿ, ಮೂರು ಜನರ ತಂಡ ಮಹಾವಿದ್ಯಾಲಯಕ್ಕೆ ಅನೀರಿಕ್ಷಿತ ಭೇಟಿ ನೀಡಿ ಇಲ್ಲಿನ ಸ್ವಚ್ಚತೆ, ಹಸಿರುಕರಣದ ಬಗ್ಗೆ ವಿದ್ಯಾರ್ಥಿಗಳೊಂದಿಗೆ, ಪ್ರಾಧ್ಯಾಪಕರೊಂದಿಗೆ ಚರ್ಚೆ ನಡೆಸಿದೆ. ಕೆಎಲ್ಇಗೆ ನಾಲ್ಕನೇ ಸ್ಥಾನ ನೀಡಿದೆ ಎಂದರು.
ತಮ್ಮ ಸಂಸ್ಥೆ 50 ವರ್ಷಗಳ ಹಳೆಯ ಕ್ಯಾಂಪಸ್, ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ಜೈಪೂರ, ಹರಿಯಾಣ, ಹಿಮಾಚಲ ಪ್ರದೇಶಗಳ ಕ್ಯಾಂಪಸ್ ಗಳು 10-12 ವರ್ಷಗಳಿಂದೆ ಆರಂಭವಾದ ಚಿಕ್ಕ ಕ್ಯಾಂಪಸ್ ಗಳಾಗಿವೆ ಎಂದು ಕೋರೆ ತಿಳಿಸಿದರು.
ಸಂಸ್ಥೆಯವರು ಕ್ಯಾಂಪಸ್ ನಲ್ಲಿ ವಾಹನಗಳ ನಿಷೇಧ ಮಾಡಿದ್ದೀರಿ, ವಾಹನಗಳು ರಸ್ತೆಯಲ್ಲಿ ನಿಲುಗಡೆ ಮಡುತ್ತಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಾ.ಪ್ರಭಾಕರ ಕೋರೆ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಮಹತ್ವ ನೀಡಿದೆ ಹೊರತು ವಿದ್ಯಾರ್ಥಿಗಳು ಸೈಕಲ್, ವಾಹನಗಳ ಮೇಲೆ ಬರುತ್ತಾರೆ ಎಂದು ಗಮನಹರಿಸುವುದಿಲ್ಲ.ವಾಹನಗಳ ನಿಷೇದ ಮಾಡಿರುವಾಗ ವಿದ್ಯಾರ್ಥಿಗಳು ಲೈಸೆನ್ಸ್ ಹೊಂದಿದ್ದಾರೆ ಇಲ್ಲವೋ ಎಂಬುದು ಪರೀಕ್ಷಿಸುವ ವಿಷಯ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿಲ್ಲ ಎಂದರು.
ಕೆಎಲ್ಇ ಉಪಕುಲಪತಿ ಡಾ. ವಿವೇಕವ ಸಾವಜಿ, ಜೆಎನ್ಎಂಸಿ ಪ್ರಾಚಾರ್ಯೆ ಡಾ. ಎನ್.ಎಸ್.ಮಹಾನಶೆಟ್ಟಿ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

loading...