ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಸೂಲಿಬೆಲೆ

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:5 ಯುವ ಬ್ರಿಗೇಡ್ ವತಿಯಿಂದ ಸ್ವಾಮಿ‌ ವಿವೇಕಾನಂದ, ಅಕ್ಕ‌ನಿವೇದಿತ ಸಾಹಿತ್ಯ ಸಮ್ಮೇಳನ ಸೆ. 10 ಮತ್ತು 11 ರಂದು ನಗರದ ಜೆಎನ್ ಎಮ್ ಸಿ ಕೆಎಲ್ ಇ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು‌ ಮಂಗಳವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಇಂಥ ಸಮ್ಮೇಳನ ರಾಜ್ಯಾದ್ಯಂತ ನಡೆದಿದೆ. ಬೆಳಗಾವಿಯಲ್ಲಿ ಸಮಾರೋಪ ನಡೆಯಲಿದೆ ಎಂದರು.
ಉದ್ಘಾಟನೆಯನ್ನು ರಾಮಕೃಷ್ಣ ‌ಮಿಷನ್ ಹಾಗೂ‌ ಮಠದ‌ ಅಂತಾರಾಷ್ಟ್ರೀಯ ಸಹ ಕಾರ್ಯದರ್ಶಿ ಸ್ವಾಮಿ ಬಲಭದ್ರಾನಂದಜಿ ಮಹಾರಾಜ ನೆರವೇರಿಸುವವರು. ಮುಗಳಕೋಡದ ಶ್ರೀ ಮುರುಘರಾಜೇಂದ್ತ ಸ್ವಾಮಿಜಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.
ಸಾಹಿತ್ಯ ಸಮ್ಮೇಳನದ ಪೂರ್ವವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗುರಿಮುಟ್ಟುವವರೆಗೆ ನಿಲ್ಲದಂತಹ ಆನಂದಕ್ಕಾಗಿ ಸೆ.7 ರಂದು ಬೆಳಿಗ್ಗೆ 6:30ಕ್ಕೆ ಬೋಗಾರವೆಸ್ ನಿಂದ ರಾಮಕೃಷ್ಣ ಮಿಷನ್ ಆಶ್ರಮದ ಕೋಟೆ ಕರೆಯವರೆಗೆ ಯುವಕರಿಂದ ಓಟ ಮಾಡಲಿದ್ದಾರೆ.
ಸೆ.10 ರವಿವಾರ ಶೋಭಾಯಾತ್ರೆ ಉದ್ಘಾಟನೆಯನ್ನು ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ನೆರವೆರಿಸಲಿದ್ದಾರೆ. ಸಾಹಿತ್ಯ ಪ್ರದರ್ಶಿನಿ ಉದ್ಘಾಟನೆಯನ್ನು ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ನೆರವೆರಿಸಲಿದ್ದಾರೆ‌. ಸಮ್ಮೇಳನದ ಉದ್ಘಾಟನೆಯನ್ನು ಸ್ವಾಮಿ ಬಲಭದ್ರಾನಂದ ಮಹಾರಾಜ್, ಡಾ. ಮುರುಘರಾಜೇಂದ್ರ ಸ್ವಾಮಿ, ಸುಬ್ರಾಯ ವಾಳ್ಕೆ ಮಾಡಲಿದ್ದಾರೆ ನಂತರ ಗೋಷ್ಠಿಗಳು ಪ್ರಾರಂಭವಾಗಲಿವೆ ಎಂದರು.
ಖ್ಯಾತ ಬರಹಗಾರ ತರುಣ ವಿಜಯ ಅಧ್ಯಕ್ಷತೆ ವಹಿಸಿವರು ವಿಭಿನ್ನ ಪತ್ರಿಕೆಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ತರುಣ ಸಾಹಿತಿಗಳ ಗೋಷ್ಠಿ ನಡೆಸುವ ಆಲೋಚನೆ ಇದೆ. ನಾಡಿನ ಅನೇಕ ಸಾಹಿತಿಗಳು, ಪ್ರಜ್ಞಾವಂತರು ಭಾಗವಹಿಸಿ ಪ್ರಬಂಧ ಮಂಡಿಸಲಿದ್ದಾರೆ ಎಂದು ಅವರು ಹೇಳಿದರು.

loading...