ಸಿದ್ದರಾಮಯ್ಯನವರ ಭ್ರಷ್ಟಾಚಾರ ಶೀಘ್ರದಲ್ಲಿಯೇ ಬಿಚ್ಚಿಡುತ್ತೇನೆ: ಬಿಎಸ್‍ವೈ

0
30
loading...

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿರುವ ಭ್ರಷ್ಟಾಚಾರ, ಅಕ್ರಮ ಹಾಗೂ ಹಗರಣಗಳ ದಾಖಲೆಗಳು ನನ್ನ ಬಳಿಯಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಸಿಎಂ ಜಾತಕ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಸಾಚಾ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರು ಎಷ್ಟು ಸಾಚಾ, ಏನೇನು ಮಾಡಿದ್ದಾರೆ ಎಲ್ಲವನ್ನೂ ಜನರ ಮುಂದಿಡುತ್ತೇವೆ. ಇವರು ಅಕ್ರಮ ನಡೆಸಿರುವ ಬಗ್ಗೆ ಶೇ. 101ರಷ್ಟು ಖಚಿತ ದಾಖಲೆಗಲು ಸಿಕ್ಕಿವೆ ಎಂದರು.
ಈ ಹಿಂದೆ ಹೇಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸಚಿವರುಗಳ ವಿರುದ್ಧ ಚಾರ್ಜ್‍ಶೀಟ್ ಬಿಡುಗಡೆ ತಡವಾಗಿರುವುದಕ್ಕೆ ಕಾರಣ ಕೆಲ ದಾಖಲೆಗಳು ಸಿಗದಂತೆ ಈ ಸರ್ಕಾರ ನೋಡಿಕೊಳ್ಳುತ್ತಿದೆ. ಏನೇ ಆಗಲಿ ದಾಖಲೆಗಳನ್ನು ಪಡೆದು ಸಿದ್ದರಾಮಯ್ಯನವರ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ ಎಂದು ಗುಡುಗಿದರು.
ಸಿದ್ದರಾಮಯ್ಯ ಹಾಗೂ ಅವರ ಸಚಿವರುಗಳ ವಿರುದ್ಧ ಖಚಿತ ದಾಖಲೆಗಳನ್ನು ಇಟ್ಟುಕೊಂಡೇ ಚಾರ್ಜ್‍ಶೀಟ್ ಬಿಡುಗಡೆ ಮಾಡುತ್ತೇವೆ. ಪ್ರಮಾಣೀಕೃತ ದಾಖಲೆಗಳನ್ನು ಪಡೆಯುವುದು ತಡವಾಗಿರುವುದರಿಂದ ದಾಖಲೆ ಬಿಡುಗಡೆಯೂ ವಿಳಂಬವಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಸಿದ್ದರಾಮಯ್ಯನವರ ಜಾತಕ ಬಿಚ್ಚಿಡುತ್ತೇನೆ ಎಂದು ಹೇಳಿದರು.

loading...