ಸುಖಿಗಾಗಿ ಮೋಕ್ಷಕ್ಕಾಗಿ ಸಾಧನೆ ಮಾಡಬೇಕಿದೆ: ಬಾಬಾ

0
38
loading...

ಸುಖಿಗಾಗಿ ಮೋಕ್ಷಕ್ಕಾಗಿ ಸಾಧನೆ ಮಾಡಬೇಕಿದೆ: ಬಾಬಾ
ಚನ್ನಮ್ಮ ಕಿತ್ತೂರು ಃ ಸಾಧನೆಯಿಲ್ಲದೆ ಮನುಷ್ಯ ಇಂದು ಅನೇಕ ಸಮಸ್ಯೆಗಳನ್ನು ಸೃಷ್ಠಿ ಮಾಡುತ್ತಿದ್ದಾನೆ. ಆದರೆ ಸಾಧನೆಯಿಲ್ಲದೆ ಯಾವೊಬ್ಬ ಮನುಷ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಶ್ರೇಷ್ಠತೆಗೆ, ಸತ್ಯತಗೆ, ಸುಖಿಗಾಗಿ ಮೋಕ್ಷಕ್ಕಾಗಿ ಸಾಧನೆ ಮಾಡಬೇಕಿದೆ ಎಂದು ರಾಷ್ಟ್ರ ಸಂತ 108 ಚಿನ್ಮಯಸಾಗರ ಜಂಗಲವಾಲೇ ಬಾಬಾ ಹೇಳಿದರು.
ದೇಗಾಂವ ಹೊನ್ನಾಪೂರ ಅರಣ್ಯ ಚಾರ್ತುಮಾಸದಲ್ಲಿ ಶನಿವಾರ ನಡೆದ ಶಿಕ್ಷಕರ ಸಮಾವೇಶ ಮತ್ತು ಆದರ್ಶ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಶಿಕ್ಷಕರು ದೇಶದ ರಕ್ಷಕರಾಗಿದ್ದಾರೆ. ಶಿಕ್ಷಕರು ಕೇವಲ ಶಿಕ್ಷಕರಾಗದೆ ದೇಶದ ನಿರ್ಮಾತರಾಗಬೇಕು. ಶಿಕ್ಷಕರು ಸಂಬಳಕ್ಕಾಗಿ ದುಡಿಯದೆ ಸಮಾಜಕ್ಕಾಗಿ ದುಡಿಯುವ ಅವಶ್ಯಕತೆ ಇದೆ. ಹಣ ಅಧಿಕಾರದಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಇಚ್ಚಾಶಕ್ತಿಯಿಂದ ಮಾತ್ರ ಬಗ್ಗೆಹರಿಯುತ್ತವೆ. ಶ್ರೀ ಚಿನ್ಮಯಸಾಗರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಮೋದಿ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವ ಪಠ್ಯಕ್ಕಿಂಲೂ ಹೆಚ್ಚಾಗಿ ವಿದ್ಯಾರ್ಧಿಗಳಲ್ಲಿ ವಿವೇಕ, ತಾಳ್ಮ, ದೂರದೃಷ್ಟಿ ಮಾನವತೆಯನ್ನು ಭೋಧಿಸುವ, ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ವಜೆಗಳನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಿಗೆ ಮಾತ್ರವಿದೆ.
60ಕ್ಕೂ ಹೆಚ್ಚೂ ಆದರ್ಶ ಶಿಕ್ಷಕರನ್ನು ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದರು
ಆರ್ಯಿಕಾ ರತ್ನ ಜೀನವಾಣಿ ಮಾತಾಜಿ, ಆಯೋಜಕಿ ಸುಮನಲತಾ ಮೋದಿ, ಉಪಾಧ್ಯಕ್ಷ ಅಲೋಕ ಮೋದಿ, ಇಂದೌರನ ಭರತ ಶಾಸ್ತ್ರಿ, ಬಾಲ ಬ್ರಹ್ಮಚಾರಿ ದೀಪಕ ಭೈಯ್ಯಾ ಮರಕಂಠಕ, ಮಗನ ಜೈನ, ಹೇಮಲತಾ ಜೈನ, ರಾಜಕುಮಾರಿ ಜೈನ ಛತ್ತಿಸಗಢ, ಜಯಪಾಲ ಪಾಟೀಲ, ಪಾರಿಸ ಅಕೋಳೆ, ದೇವೇಂದ್ರ ಪಾಟೀಲ ಶಿಕ್ಷಕರಾದ ಮಂಜುನಾಥ ಕಳ್ಳಸಣ್ಣವರ ಸಿ.ಎಂ. ಪಾಗಾದ, ಎಸ್.ಎಸ್.ಹಾದಿಮನಿ, ಎಂ.ಪಿ.ಕದಂ, ಎಸ್,ಪಿ,ತಪರಿ, ಎಲ್.ಡಿ.ಜಂಗಳಿ, ಎಸ್.ಬಿ.ಪಾಟೀಲ, ಎಸ್.ಐ. ಭಾವನ್ನವರ, ಬಿ.ಸಿ.ಬಿದರಿ, ಸೇರಿದಂತೆ ಇತರರು ಇದ್ದರು. ಶಿಕ್ಷಕ ಕಡಕೋಳ ನಿರೂಪಿಸಿದರು. ಪ್ರದೀಪ ಸಾವಂತ ಸ್ವಾಗತಿಸಿದರು. ಬಸವರಾಜ ಶಿರಗಾಪೂರ ವಂದಿಸಿದರು

loading...