ಹೂಲಿಕಟ್ಟಿ ಹತ್ತಿರ ಹಾಲು ಶೀಥಲೀಕರಣ ಘಟಕ ಎರಡು ತಿಂಗಳಲ್ಲಿ ಕಾರ್ಯಾರಂಭ

loading...

 

ಕನ್ನಡಮ್ಮ ಸುದ್ದಿ. ಚನ್ನಮ್ಮ ಕಿತ್ತೂರು
ಕಿತ್ತೂರ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಹಾಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕ್ರೋಢಿಕೃತವಾಗುತ್ತಿದೆ. ರೈತರಿಗೆ ಹಾಲಿನ ಬಿಲ್ 10 ದಿನದ ಒಳಗಾಗಿ ನೀಡಲಾಗುತ್ತಿದೆ. ಸಂಘಗಳಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿ ರೈತರ ಮತ್ತು ಸಂಘಗಳ ಶ್ರೇಯೋಭಿವೃದ್ಧಿಗಾಗಿ ಎಲ್ಲ ಕ್ರಮ ಕೈಗೊಳಲಾಗುತ್ತಿದೆ.
ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕೆಎಂಎಫ್ ಅಧ್ಯಕ್ಷ ವಿವೇಕರಾವ ಪಾಟೀಲ ಹೇಳಿದರು.

ಇಲ್ಲಿಯ ಡೋಬರಕೊಪ್ಪ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ತಾಲೂಕಿನ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 574 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು 1.60 ಲಕ್ಷ ಲೀಟರ ಹಾಲನ್ನು ಸಂಗ್ರಹಣೆಯಾಗುತ್ತಿದ್ದು, 92 ಸಾವಿರ ಲಿಟರ್ ಹಾಲು ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತಿದೆ. ಸಂಸ್ಥೆಯ ಬಗ್ಗೆ ರೈತರು ಕಾಳಜಿ ವಹಿಸಬೇಕು.

ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಉಬೆದ್ದುಲ್ಲಾ ಖಾನ ಮಾತನಾಡಿ, ಒಕ್ಕೂಟದ ವಾರ್ಷಿಕ ಸಭೆ ಕರೆಯುವ ಮುನ್ನ ಆಯಾ ತಾಲೂಕಿನ ಒಕ್ಕೂಟದ ಸಭೆ ಕರೆದು ಸರ್ಕಾರದಿಂದ ಹಾಲಿಗೆ ಕನಿಷ್ಟ ದರ ಆಕಳ ಹಾಲು 23 ರೂ. 35 ಪೈಸೆ. ಎಮ್ಮೆಯ ಹಾಲು 36 ರೂ.ಗಳಂತೆ ಕೊಡುತ್ತೇವೆ. ರೂ 5 ರೂ ಸರಕಾರದಿಂದ ಪ್ರೋತ್ಸಾಹದನವು ನೀಡಲಾಗುತ್ತಿದೆ. ಸಂಸ್ಥೆಯಿಂದ ಕೃತಕ ಗರ್ಭಧಾರಣೆ, ಮಿಲ್ಕಿಂಗ ಯಂತ್ರ, ಪಶುವಿನ ಹಾಲಿನ ಗುಣಮಟ್ಟ ಹೆಚ್ಚಿಸಲು ಪಶು ಆಹಾರ ನೀಡಲಾಗುತ್ತಿದೆ. ರೈತರಿಗೆ ಹಸು ಮತ್ತು ಎಮ್ಮೆ ವಿಮೆ ಯೋಜನೆ ಜಾರಿಗೆ ತಂದಿದೆ. ನಮ್ಮ ಸಂಘಕ್ಕೆ ಹಾಲನ್ನು ಪೂರೈಸಿದರೆ ಅಂತಹ ರೈತನು ಆಕಸ್ಮಿಕವಾಗಿ ಮರಣ ಹೊಂದಿದರೆ ಎರಡು ಲಕ್ಷ ರೂ. ವಿಮಾ ಸೌಲಭ್ಯವಿದೆ. ರೈತರ ಮಕ್ಕಳು ಉನ್ನತ ಮಟ್ಟದ ವ್ಯಾಸಂಗಕ್ಕೆ 12 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಭೂರಹಿತ ಹೈನುಗಾರಿಕೆ ಮಾಡುವವರು ನಿರಂತರ ಹಸಿರು ಮೇವು ಪಡೆಯುದಕ್ಕೆ ಘಟಕ ಸ್ಥಾಪಿಸಲು ಒಕ್ಕೂಟದಿಂದ ಶೇ.50 ರಷ್ಟು ಧನ ಸಹಾಯ ನೀಡಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕೆ.ಎಂ.ಎಫ್ ನಿರ್ದೇಶಕ ಡಾ. ಬಸವರಾಜ ಪರವಣ್ಣವರ ಮಾತನಾಡಿ, ಹಾಲು ಉತ್ಪಾದಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ದಿಸೆಯಲ್ಲಿ ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದ ಹತ್ತಿರ 15 ಸಾವಿರ ಲೀಟರ್ ಸಾಮಥ್ರ್ಯದ ಹಾಲು ಶೀಥಲೀಕರಣ ಘಟಕ ನಿರ್ಮಾಣ ಕಾರ್ಯ ನಡೆದಿದ್ದು, ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

ಕೆ.ಎಂ.ಎಫ್. ನಿರ್ದೇಶಕ ಈಶ್ವರ ಉಳ್ಳೆಗಡ್ಡಿ ಮಾತನಾಡಿದರು. ಕೆ.ಎಂ.ಎಫ್ ಉತ್ಪಾಧಕರ ವ್ಯವಸ್ಥಾಪಕ ಡಾ|| ಜಿ.ಆರ್ ಮನ್ನೇರಿ, ಉಪವ್ಯವಸ್ಥಾಪಕ ಡಾ|| ವಿ.ಕೆ.ಜೋಶಿ, ಮಾರುಕಟ್ಟೆ ವಿಭಾಗದ ಅಶೋಕ ಕಾದ್ರೋಳ್ಳಿ, ರಾಣಿ ಶುಗರ್ಸ್ ನಿರ್ದೇಶಕ ಶಿವನಗೌಡ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.

loading...