18 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಧನಪಾಲ್

0
16
loading...

ಚೆನ್ನೈ:- ಟಿಟಿವಿ ದಿನಕರನ್ ಬಣದ 18 ಶಾಸಕರನ್ನು ಅನರ್ಹಗೊಳಿಸಿ ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವುಪಡೆಯುತ್ತಿದ್ದು, ಪಳನಿ ಸ್ವಾಮಿ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಹಾಗೂ ಕಲಾಪಕ್ಕೆ ಅಡ್ಡಿ ಪಡಿಸುವ ಬೆದರಿಕೆಯೊಡ್ಡುತ್ತಿರುವ ಟಿಟಿವಿ ದಿನಕರನ್ ಬೆಂಬಲಿತ 18 ಮಂದಿ ಶಾಸಕರನ್ನು ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸ್ಪೀಕರ್ ಧನಪಾಲ್ ಅವರು 1986ರ ತಮಿಳುನಾಡು ವಿಧಾನಸಭೆ ಪಕ್ಷಪಾತ ಕಾನೂನಿನ ಅಡಿಯಲ್ಲಿ ಟಿಟಿವಿ ದಿನಕರನ್ ಬೆಂಬಲಿತ ಶಾಸಕರಾದ ತಂಗ ತಮಿಳ್ ಸೆಲ್ವನ್, ಸೆಂಥಿಲ್ ಬಾಲಾಜಿ, ಪಿ ವೆಟ್ರಿವೇಲ್ ಮತ್ತು ಕೆ ಮರಿಯಪ್ಪನ್ ಸೇರಿದಂತೆ ಒಟ್ಟು 18 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದಾರೆ.

loading...