ಅಡ್ವಾನ್ಸ್‌ ರೋಬೋಟಿಕ್ಸ್‌ ಕಾರ್ಯಾಗಾರ

0
34
loading...

ಹಳಿಯಾಳ: ಇಲ್ಲಿನ ಇಂಜಿನೀಯರಿಂಗ್‌ ಕಾಲೇಜಿನಲ್ಲಿ ಅ. 22 ಮತ್ತು 23 ರಂದು ವಿದ್ಯಾರ್ಥಿಗಳಿಗೆ ಅಡ್ವಾನ್ಸ್‌ ರೋಬೋಟಿಕ್ಸ್‌ ಎಂಬ ಕಾರ್ಯಗಾರವನ್ನು ಬೆಂಗಳೂರಿನ ಕಂಪಿಟೆನ್ಸ್‌ ಫ್ಯಾಕ್ಟರಿ ಮತ್ತು ರೋವ್‌ ಲ್ಯಾಬ್ಸ್‌ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ರೋಬೋಟಿಕ್ಸ್‌ ಕುರಿತಾಗಿ ಪ್ರಾಯೋಗಿಕ ಜ್ಞಾನವನ್ನು ಪಡೆದು ಹಲವಾರು ರೋಬೋಟ್‌ಗಳ ಮಾದರಿಯನ್ನು ನಿರ್ಮಿಸಿದರು. ವಾಹನ ಸಂಚಾರಕ್ಕೆ ಇರುವ ಅಡೆತಡೆಗಳನ್ನು ಗುರುತಿಸುವುದು, ಸ್ವಯಂಚಾಲಿತವಾಗಿ ವಸ್ತುಗಳನ್ನು ಪೂರ್ವ ನಿರ್ಧರಿತ ಪ್ರದೇಶದಲ್ಲಿ ಇಡುವುದು, ಧ್ವನಿಯ ಮುಖಾಂತರ ಸಂಜ್ಞೆಗಳನ್ನು ಗ್ರಹಿಸಿ ಕೆಲಸ ಮಾಡುವುದು ಹಾಗೂ ಇನ್ನೂ ಅನೇಕ ವಿನೂತನ ರೋಬೊಟ್‌ಗಳ ನಿರ್ಮಾಣವನ್ನು ವಿದ್ಯಾರ್ಥಿಗಳು ಕಲಿಸಲಾಯಿತು. ಆರ್ಡಿಯನೋ ಬೋರ್ಡ್‌, ಜಾವಾ ಪ್ರೋಗಾಮಿಂಗ್‌ ಹಾಗೂ ವಯರ್‌ಲೆಸ್ಸ್‌ ತಂತ್ರಜ್ಞಾನವನ್ನು ಬಳಸಿಕೊಂಡು ಈ ಎಲ್ಲ ರೋಬೊಟ್‌ ಮಾದರಿಯನ್ನು ನಿರ್ಮಿಸಲಾಗಿತ್ತು.
150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕಂಪಿಟೆನ್ಸ್‌ ಫ್ಯಾಕ್ಟರಿ ಸಂಸ್ಥೆಯ ನಿರ್ದೇಶಕ ಪ್ರಮೋದ್‌ಚಕ್ರವರ್ತಿ ಪಾಟೀಲ ಮತ್ತು ಸೂರಜ್‌ ಎಸ್‌.ಡಿ. ಹಾಗೂ ರೋವ್‌ ಲ್ಯಾಬ್ಸ್‌ ಸಂಸ್ಥೆಯ ನಿರ್ದೇಶಕ ಶ್ರೇಯಸ್ಸ್‌ ವೆರ್ಣೇಕರ್‌ ನೇತೃತ್ವದ ತಂಡವು ತರಬೇತಿ ನೀಡಿತು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವ್ಹಿ.ವ್ಹಿ. ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ನವೀನ ಸಿ. ಎಸ್‌ ಸ್ವಾಗತಿಸಿದರು. ಪ್ರೊ. ಆರ್‌. ಎನ್‌. ಪಾಟೀಲ ಅವರು ವಂದಿಸಿದರು. ಡಾ. ಎಚ್‌. ಮಿಶ್ರಿಕೋಟಿ, ಪ್ರೊ. ರವೀಂದ್ರ ಎಮ್‌, ಪ್ರೊ. ಸಂದೀಪ ಟಿ, ಪ್ರೊ. ಅರ್ಪಿತಾ ಎಚ್‌ ಮತ್ತು ಪ್ರೊ, ವಿನಯ ಬಿ ಅವರು ಉಪಸ್ಥಿತರಿದ್ದರು.

loading...