ಅಪಾರ ಚಿನ್ನಾಭರಣ ದೋಚಿದ್ದ ವ್ಯಕ್ತಿ ಬಂಧನ

0
18
loading...

ಕನ್ನಡಮ್ಮ ಸುದ್ದಿ-ತೇರದಾಳ: ಹೋಂಡಾ ಡಿಯೋ ದ್ವಿಚಕ್ರ ವಾಹನದ ಮೇಲೆ ಸಂಶಾಸ್ಪದವಾಗಿ ಹೋಗುತ್ತಿದ್ದ ಯುವಕನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಬಂಧಿತ ಕಳ್ಳತನ ಆರೋಪಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ವಿಠ್ಠಲ ಚಂದ್ರಕಾಂತ ವಾಗ್ಮೋಡೆ ಅವನಿಂದ ಅಂದಾಜು 2.5 ಲಕ್ಷ ಮೌಲ್ಯದ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಳೆದ ಗುರುವಾರ ಪಟ್ಟಣದ ರಬಕವಿ ರಸ್ತೆಯ ಕಂಠಿ ಬಸವೇಶ್ವರ ದೇವಸ್ಥಾನ ಬಳಿ ಹೋಂಡಾ ಕಂಪನಿಯ ಡಿಯೋ ದ್ವಿಚಕ್ರ ವಾಹನದ ಮೇಲೆ ವಿಠ್ಠಲ ವಾಗ್ಮೋಡೆ ಸಂಶಾಸ್ಪದವಾಗಿ ಹೋಗುತ್ತಿದ್ದ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸ್ಪಿ ಸಿ.ಬಿ. ರಿಷ್ಯಂತ, ಡಿಎಸ್ಪಿ ರಾಮನಗೌಡ ಹಟ್ಟಿ, ಬನಹಟ್ಟಿ ಸಿಪಿಐ ಎಸ್‌.ಬಿ. ಮಂಟೂರ ಮಾರ್ಗದರ್ಶನದಲ್ಲಿ ಸ್ಥಳೀಯ ಠಾಣಾಧಿಕಾರಿ ಗುರುನಾಥ ಚೌವಾಣ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತನ ಬಳಿ ಚಿನ್ನದ ಮತ್ತು ಬೆಳ್ಳಿಯ ಆಭರಣಗಳು ದೊರೆತಿದ್ದು, ಎಲ್ಲಿಂದಲೋ ಕಳ್ಳತನ ಮಾಡಿ ಮಾರಾಟ ಮಾಡಲು ಹೊರಟಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸಿಬ್ಬಂದಿಗಳಾದ ಎಎಸೈ ಸೂರ್ಯವಂಶಿ, ಮಹಾಂತೇಶ ಗುರವ, ಎಸ್‌.ಪಿ. ಹುಕ್ಕೇರಿ, ಅನಿಲ ಮದಲಮಟ್ಟಿ, ಲೋಕೇಶ ಹುಕುಮನವರ, ಮೆಕ್ಕಳಕಿ, ಮುರಡಿ ಹಾಗೂ ಅಮಧಾಳ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ಚೌವಾಣ ತನಿಖೆ ಕೈಗೊಂಡಿದ್ದಾರೆ.

loading...