ಅಮೀತ ಶಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ: ಶಾಸಕ ಪಿ.ರಾಜೀವ್‌

0
31
loading...

ಹಾರೂಗೇರಿ: ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ನೇತೃತ್ವದಲ್ಲಿ ನವ್ಹೆಂಬರ 20ರಂದು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುವ ಮೂಲಕ ನಂತರ ಹಾರೂಗೇರಿ ಪಟ್ಟಣದಲ್ಲಿ ಅದೇ ತಿಂಗಳ 20ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲ್ಲಿ ಸಾವಿರಾರು ಬೆಂಬಲಿರೊಂದಿಗೆ ಬಿಜೆಪಿ ಪಕ್ಷ ಸೇರುತ್ತೇವೆ ಎಂದು ಕುಡಚಿ ಶಾಸಕ ಪಿ.ರಾಜೀವ್‌ ಹೇಳಿದರು.ಕುಡಚಿ ಮತಕ್ಷೇತ್ರದ ಯಲ್ಪಾರಟ್ಟಿ ಗ್ರಾಮದ ವಾಣಿ ತೋಟದ ಹತ್ತಿರ ಶಾಸಕರ ಅನುದಾನದಡಿಯಲ್ಲಿ ಅಂದಾಜುಮೊತ್ತ ಮೂರು ಲಕ್ಷÀ.ರೂ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಬಹಳಷ್ಟು ಬೇರೆಬೇರೆ ಪಕ್ಷದ ಶಾಸಕರು ಕೂಡ ಬಿಜೆಪಿಯತ್ತ ಮುಖ ಮಾಡುತ್ತಿದ್ದು, 2018 ರ ಚುನಾವಣೆ ದಿಕ್ಸೂಚಿಯಾಗಲಿದೆ ಎಂದ ಅವರು ಯಾವುದೇ ಒಬ್ಬ ವ್ಯಕ್ತಿಯ ಘನತೆಯನ್ನು ರಾಜಕೀಯ ಬಳಸಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ, ರಾಜಕೀಯವಾಗಿ ಯಾವುದೇ ವಿವಾದವನ್ನು ನಾನು ಯಾವತ್ತೂ ಸಮರ್ಥನೆ ಮಾಡುವುದಿಲ್ಲ ಎಂದು ಕುಡಚಿ ಶಾಸಕ ಪಿ.ರಾಜೀವ್‌ ಟಿಪ್ಪುಸುಲ್ತಾನ ಜಯಂತಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಇದೇವೇಳೆ ಶಾಸಕರ ಅನುದಾನದಲ್ಲಿ ಯಬರಟ್ಟಿ ಗ್ರಾಮದಲ್ಲಿ ಒಟ್ಟು ಆರು ಲಕ್ಷ ರೂ ವೆಚ್ಚದಲ್ಲಿ ನಂದಿ ತೋಟದ ರಸ್ತೆ ಸುಧಾರಣೆ ಹಾಗೂ ಮೋಳೆ ತೋಟದ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದರು.ಈ ಸಂದರ್ಭಧಲ್ಲಿ ನ್ಯಾಯವಾದಿ ಉದಯಕುಮಾರ ಮೋಳೆ, ಆಶೋಕ ಒಡೆಯರ, ಸಿದ್ದಾರೂಢ ಖೇತ್ರಿ, ಸಿದ್ಧಾರೂಢ ಇಂಗಳಗಿ, ಶಿವಾನಂದ ಪಾಟೀಲ, ಬಸು ತಳವಾರ, ಬಸು ಖಾನಟ್ಟಿ, ಶಿವಾನಂದ ಮೇಟಿ, ಮಲ್ಲಪ್ಪ ಮೋಳೆ, ಶಂಕರ ಬಿರಾದಾರ, ಹಣಮಂತ ಗದಗ, ವಿವೇಕ ರಾವತ, ಮಹೇಶ ಪಾಟೀಲ, ಹಾಲಪ್ಪ ಹುಣಶ್ಯಾಳ, ರಾಮು ಒಡೆಯರ, ಚಿದಾನಂದ ಕೋಳಿ, ಬಸವರಾಜ ತೇರದಾಳ, ಮಹೇಶ ಗುಡೋಡಗಿ, ಬಸವರಾಜ ಠಕ್ಕಣ್ಣವರ, ರಾಮಣ್ಣಾ ಕುರಿ, ನಂಜುಂಡಿ ಮಾಂಜರಿ, ಮುತ್ತುರಾಜ ಗೋಳಸಂಗಿ, ಬಾಳು ತಳವಾರ, ದೇವಪ್ಪಾ ಚೌಗಲಾ, ಇಮ್ತಿಯಾಜ್‌ ಮುಲ್ಲಾ, ರಾಘವೇಂದ್ರ ನೂಲಿ, ಕುಮಾರ ಹರಿಜನ, ಮಹಾದೇವ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...