ಆಶ್ರಯ ಯೋಜನೆಯ ಮನೆ ಮಂಜೂರಾತಿ ಪತ್ರ ಹಂಚಿಕೆ

0
32
loading...

ಶಿರಸಂಗಿ: ಅಂಗವಿಕಲರು, ನಿರ್ಗತಿಕರು, ವಿಧವೆಯರು ಹಾಗೂ ಮನೆಯಿಲ್ಲದವರನ್ನು ಗುರುತಿಸಿ ಪ್ರಾಮಾಣಿಕವಾಗಿ ಮನೆಯನ್ನು ಹಂಚಿಕೆ ಮಾಡಲು ಎಲ್ಲ ಸದಸ್ಯರು ಶ್ರಮಿಸುವಂತೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯಿತಿಗೆ ಶುಕ್ರವಾರ ಶಾಸಕ ಆನಂದ ಮಾಮನಿ ಭೇಟಿ ನೀಡಿ 2016-17 ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಅವರು ಮಾತನಾಡಿದರು. ಚುನಾವಣೆ ಬಂದಾಗ ಮಾತ್ರ ಪಕ್ಷ, ಪಂಗಡ ಅದನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಅಭಿವೃದ್ಧಿಯೆ ಮೊದಲು ಗುರಿಯಾಗಬೇಕು. ಪ್ರತಿಯೊಬ್ಬ ಜನಪ್ರತಿನಿಧಿಗಳು ಒಗ್ಗಟಾಗಿ ಅಭಿವೃದ್ಧಿಗೆ ಒತ್ತು ನೀಡಿ. ಕಳೆದ 9 ವರ್ಷಗಳಿಂದ ದೇವಸ್ಥಾನ, ಮಸೀದಿ, ಕಾಂಕ್ರೀಟ್‌ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಕಾಮಗಾರಿಗಳ ಮೂಲಕ ಗ್ರಾಮಕ್ಕೆ ಕೆಲಸವನ್ನು ಮಾಡಿದ್ದೆನೆ ಎಂದರು.
ಈ ಸಂದರ್ಭದಲ್ಲಿ ಮುತ್ತು ಭಜೇಂತ್ರಿ, ಈರಯ್ಯ ಶಿವಪ್ಪಯ್ಯನಮಠ, ಬಸಪ್ಪ ಇದ್ಲಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

loading...