ಈಜಲು ಹೋಗಿದ ಮೂವರು ನೀರುಪಾಲು

0
22
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಈಜಲು ಹೋಗಿ ಮೂವರು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಹಣ್ಣಿಕೇರಿ ಶ್ರೀಶೈಲ್ ದೊಡ್ಡಯ್ಯ ಚರಂತಿಮಠ (67), ಮೊಮ್ಮಕ್ಕಳಾದ ಸಮರ್ಥ ತಿಪ್ಪಯ್ಯ ಹಿರೇಮಠ (12), ಸೋಮಯ್ಯ ತಿಪ್ಪಯ್ಯ ಹಿರೇಮಠ (11) ಮೃತರು.
ಶೀಗೆಹುಣ್ಣಿಮೆ ಪೂಜೆಗೆಂದು ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಿಂದ ಹಣ್ಣಿಕೇರಿ ಗ್ರಾಮದ ಅಜ್ಜನ ಮನೆಗೆ ಬಂದಿದ್ದ ಮೊಮ್ಮಕ್ಕಳು ಈಜಲು ಕರೆದುಕೊಂಡು ಹೋಗುವಂತೆ ಅಜ್ಜ ಶ್ರೀಶೈಲ್, ಸಮರ್ಥ ಮತ್ತು ಸೋಮಯ್ಯ ಈಜಲು ಹೋಗಿ ಮೃತಪಟ್ಟಿದ್ದಾರೆ.
ಮೊಮ್ಮಕ್ಕಳ ಜೊತೆಗೆ ಗ್ರಾಮದಿಂದ 1 ಕಿ.ಮೀ. ಸಮೀಪದ ಸಂಬಂಧಿಕರ ಹೊಲದಲ್ಲಿರುವ. ತೆರೆದ ಬಾವಿಗೆ ಕರೆದುಕೊಂಡು ಹೋಗಿದ್ದರು. ಬಾವಿಯಲ್ಲಿ ಈಜುವ ಸಂದರ್ಭದಲ್ಲಿ ಮೊಮ್ಮಕ್ಕಳು ಮತ್ತು ಅಜ್ಜ ನೀರುಪಾಲಾಗಿದ್ದಾರೆ.
ಅಜ್ಜ ಶ್ರೀಶೈಲ್ ಮತ್ತು 5ನೇ ತರಗತಿ ಓದುತ್ತಿರುವ ಸೋಮಯ್ಯ ಅವರ ಮೃತ ದೇಹ ದೊರೆತಿವೆ. 6ನೇ ತರಗತಿ ಓದುತ್ತಿದ್ದ ಸಮರ್ಥ ದೇಹ ಬಾವಿಯಲ್ಲಿ ಮುಳುಗಿದ್ದು, ಶವ ಪತ್ತೆಗಾಗಿ ಬೈಲಹೊಂಗಲ ಪಟ್ಟಣದ ಅಗ್ನಿಶಾಮಕ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ನೇಸರಗಿ ಮತ್ತು ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loading...