ಉತ್ಸವ ಬಂದರೆ ಮಾತ್ರ ಕೋಟೆ ಆವರಣ ಬೆಳಕಿನಿಂದ ಜಗಮಗ !

0
26
loading...

| ಶೇಖರ ಕಲ್ಲೂರ
ಚನ್ನಮ್ಮ ಕಿತ್ತೂರುಃ ಪ್ರಥಮ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಹಾಗೂ ಗಂಡು ಗಚ್ಚಿ ಹಾಕಿ ಕಿತ್ತೂರು ಸ್ವಾತಂತ್ರಕ್ಕೆ ಬ್ರಿಟಿಷರ ವಿರುದ್ಧ ರಣ ಕಹಳೆ ಉದಿದ ಮೊದಲ ಮಹಿಳೆ ಕಿತ್ತೂರು ಚನ್ನಮ್ಮಾಳ ಐತಿಹಾಸಿಕ ಇತಿಹಾಸ, ತ್ಯಾಗ ಬಲಿದಾನ ನಾಡಿಗೆ ಪರಿಚಯಿಸುವ ಉದ್ದೇಶದಿಂದ ಕಿತ್ತೂರು ಕೋಟೆಯ ಆವರಣದಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರಚಿಸಲಾಗಿತು. ಆದರೆ, ಪ್ರಾಧಿಕಾರದ ನಿರ್ಲಕ್ಷತೆಯಿಂದ ಈ ಯೋಜನೆ ತನ್ನ ಕಳೆ ಕಳೆದುಕೊಳ್ಳುತ್ತದೆ.
ಚನ್ನಮ್ಮಾಜಿಯ ಶೌರ್ಯ ಸಾಹಸಗಳನ್ನು ಸಾರಲು ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಸಹ ಒಂದಾಗಿದೆ ಈ ಕಾರ್ಯಕ್ರಮ ಮೂರು ದಿನ ನಡೆಯುವ ಚನ್ನಮ್ಮಾಜಿ ಉತ್ಸವಕ್ಕೆ ಮಾತ್ರ ಸಿಮೀತವಾಗಿದೆ. ಚನ್ನಮ್ಮ ಕಿತ್ತೂರಿನ ಗತಕಾಲದ ವೈಭವ, ರಾಣಿ ಚನ್ನಮ್ಮಾಜಿ ಬ್ರಿಟಿಷರ ವಿರುದ್ಧ ಆಡಿದ ವೀರಾವೇಶದ ಮಾತುಗಳು ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಆರ್ಭಟ, ಥ್ಯಾಕರೆಯ ನರಿ ಬುದ್ಧಿ ವಿಚಾರಗಳು, ವೀರ ಸೈನಿಕರ ಕಿತ್ತೂರು ಗೆಲುವಿಗಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ವೇಳೆ ಮೂಗಿಲು ಮುಟ್ಟುವ ಹರ ಹರ ಮಾಹಾದೇವ ಘೋಷಣೆ, ಮೈ ರೋಮಾಂಚನವಾಗುವ ಯುದ್ಧದ ಸನ್ನಿವೇಸಗಳು, ಕುದುರೆ, ಆನೆ, ಆಯುಧಗಳ ಜೆಂಕರಿಸುವ ನಾದಗಳು ಹೀಗೆ ಕಿತ್ತೂರು ನಾಡಿನ ಸಮಗ್ರ ಇತಿಹಾಸವನ್ನು ಧ್ವನಿ ಮತ್ತು ಬೆಳಕಿನಲ್ಲಿ ಪ್ರತಿ ವರ್ಷ ಉತ್ಸವದಲ್ಲಿ ಮಾತ್ರ ಮಾಡುತ್ತ ಬರುತ್ತಿದ್ದಾರೆ.
ಮಾಜಿ ಶಾಸಕ ಸುರೇಶ ಮಾರಿಹಾಳ ಪ್ರಯತ್ನದಿಂದ ಈ ಧ್ವನಿ ಬೆಳಕು ಕಾರ್ಯಕ್ರಮ ಸಿದ್ಧಗೊಳಿಸಿ 2011 ನೇ ಸಾಲಿನಲ್ಲಿ ಉದ್ಘಾಟಿಸಲಾಗಿತು. ನಂತರ ಮತ್ತದೇ ಕಾರ್ಯಕ್ರಮವನ್ನು 2014 ರಲ್ಲಿ ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಂದ ಉದ್ಘಾಟನೆಗೊಂಡಿತು. ಈ ರೀತಿ ಒಂದೇ ಕಾರ್ಯಕ್ರಮ ಎರಡೆರಡು ಬಾರಿ ಉದ್ಘಾಟನೆಗೊಳಿಸಿ ಪ್ರತಿ ಶನಿವಾರ ಮತ್ತು ಭಾನವಾರ ಪ್ರದರ್ಶನ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತು ಆದರೆ ಘೋಷಣೆ ಘೋಷಣೆಯಾಗಿಯೇ ಉಳಿದು ಪ್ರದರ್ಶನ ಮಾತ್ರ ಕಂಡಿಲ್ಲ. ಇದರಿಂದ ಸರಕಾರದ ಕೋಟ್ಯಾಂತರ ಹಣ ಧ್ವನಿ ಮತ್ತು ಬೆಳಕಿನ ಸಂಯೋಜನೆ ಮಾಡಿದ ತಂತ್ರಜ್ಞರ ಶ್ರಮ ಇದನ್ನು ಕೋಟೆಯಲ್ಲಿ ಅಳವಡಿಸಲು ಶ್ರಮಿಕರ ಶ್ರಮ ವ್ಯರ್ಥವಾಗುವುದರೊಂದಿಗೆ ಇಲ್ಲಿ ಬಳಸಲಾದ ಸಾಮಗ್ರಿಗಳು ಧೂಳು ಜಂಗು ಹಿಡಿಯುತ್ತ ಬಿದ್ದಿವೆ ಇಲ್ಲಿ ಬಳಸಲಾದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಧ್ವನಿವರ್ಧಕಗಳು ವಿದ್ಯುತ್‌ ಪರಿಕರಗಳು ಹಾಳಾಗುತ್ತಿವೆ.

loading...