*ಕಟಕ ಸಿನಿಮಾ ಶೀರ್ಷಿಕೆ ಬದಲಿಸಲು ಒತ್ತಾಯ

0
34
loading...

ಕನ್ನಡಮ್ಮ ಸುದ್ದಿ

ಬೆಳಗಾವಿ: ಕರ್ನಾಟಕದ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ಅ. 13ರಂದು ಬಿಡುಗಡೆಗೊಳ್ಳಲಿರುವ ಎನ್.ಎಸ್. ರಾಜಕುಮಾರ ನಿರ್ಮಾಣದ, ರವಿ ಬಸ್ರೂರ ನಿರ್ದೇಶಿಸಿದ ಕಟಕ ಚಲನಚಿತ್ರದ ಶೀರ್ಷಿಕೆ ಬದಲಿಸಬೇಕು ಎಂದು ಅಖಿಲ ಕರ್ನಾಟಕ ಹಿಂದೂ ಕಾಟಿಕ ಸಮಾಜ ಆಗ್ರಹಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ರಾಜ್ಯಾಧ್ಯಕ್ಷ ಅಜಿತ ಪವಾರ, ಕಟಕ ಎಂಬ ಚಿತ್ರದ ಶೀರ್ಷಿಕೆಯು ಸಮಸ್ತ ಕಾಟಿಕ ಸಮುದಾಯವನ್ನು ನಿಂದಿಸುವ ಶೀರ್ಷಿಕೆಯಾಗಿದೆ. ಸಾಮಾಜಿಕವಾಗಿ ಹಿಂದುಳಿದುವ ಸಮುದಾಯವನ್ನು ನಿಂದಿಸುವ ಕೆಲಸ ಯಾರೂ ಮಾಡಬಾರದು. ಹೀಗಾಗಿ ಈ ಕಟಕ ಎಂಬ ಶೀರ್ಷಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಚಲನಚಿತ್ರವನ್ನೇ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಬಿಡುಗಡೆಯಾಗಿರುವ ಪೆÇೀಸ್ಟರ್, ಟ್ರೇಲರ್ ಹಾಗೂ ಟೀಸರ್‍ಗಳಲ್ಲಿ ಕಟಕ ಎಂಬ ಪದ ಬಳಕೆ ಮಾಡಿದ್ದು ಭಾರೀ ಸದ್ದು ಮಾಡಿದೆ. ಹೀಗಾಗಿ ಇದು ಕಾಟಿಕ ಸಮುದಅಯವನ್ನು ಹೀನಾಯವಾಗಿ ಅಣಕಿಸುವ ಪದವಾಗಿದ್ದು, ಈ ಬಗ್ಗೆ ಚಿತ್ರ ತಂಡದವರು ಸ್ಪಷ್ಟೀಕರಣ ನೀಡಿ, ಶೀರ್ಷಿಕೆ ಬದಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ನಮ್ಮ ಸಮುದಾಯವನ್ನು ಕರ್ನಾಟಕದಲ್ಲಿ ಕಟಕ, ಕಾಟಿಕ, ಕಟುಕ, ಖಾಟಿಕ ಎಂಬುದಾಗಿ ಕರೆಯಲಾಗುತ್ತಿದೆ. ಆದರೆ ಅತಿ ಹಿಂದುಳಿದ ಸಮುದಾಯವಾಗಿರುವ ಕಾಟಿಕ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಲಾಗುತ್ತಿದೆ. ಅಮಾನವೀಯ ವರ್ತನೆ ವೇಳೆ ಕಟುಕ, ಕಟಕ ಎಂಬ ಪದ ಬಳಕೆ ಮಾಡಿ ಸಮುದಾಯವನ್ನು ನಿಂದಿಸುತ್ತಿರುವುದು ಖಂಡನೀಯ ಎಂದರು.

ಅಮಾನವೀಯ ಸನ್ನಿವೇಶ ವೇಳೆ ಹಾಗೂ ಸಾಮಾನ್ಯವಾಗಿ ಬÉೈಗುಳವಾಗಿಯೂ ಕಟಕ, ಕಟುಕ ಎಂಬ ಪದ ಬಳಸಿ ಅವಮಾನ ಮಾಡುತ್ತಿರುವುದು ಸಮಾಜದ ಬಗ್ಗೆ ಕೆಟ್ಟ ಸಂದೇಶ ನೀಡಲಾಗುತ್ತಿದೆ. ಕಟುಕ, ಕಟಕ ಎಂದು ಕೆಟ್ಟದಾಗಿ ಬಳಸುತ್ತಿರುವುದರಿಂದ ರಾಜ್ಯದಲ್ಲಿರುವ ಸಮುದಾಯದ ಲಕ್ಷಾಂತರ ಜನರ ಭಾವನೆಗಳಿಗೆ ನೋವಾಗುತ್ತಿದೆ. ಅನೇಕ ಚಲನಚಿತ್ರ ಹಾಗೂ ನಾಟಕಗಳಲ್ಲಿ ಈ ಶಬ್ದ ಹೀನಾಯವಾಗಿ ಬಳಸಲಾಗುತ್ತಿದೆ. ಹೀಗಾಗಿ ಕೆಟ್ಟದಾಗಿ ಕಟಕ, ಕಟುಕ ಎಂಬ ಪದ ಬಳಕೆ ಮಾಡದಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದರು.

ಅತಿ ಹಿಂದುಳಿದ ಸಮುದಾಯವಾಗಿರುವ ಹಿಂದೂ ಕಾಟಿಕ ಸಮುದಾಯ ದೇಶದ ಬಹುತೇಕ ರಾಜ್ಯಗಳಲ್ಲಿ ಎಸ್‍ಸಿ ವರ್ಗಕ್ಕೆ ಸೇರಿಸಲಾಗಿದೆ. ಅದರಂತೆ ಕರ್ನಾಟಕದಲ್ಲೂ ಎಸ್‍ಸಿಗೆ ಸೇರ್ಪಡೆ ಮಾಡಬೇಕು ಎಂದು ನಮ್ಮ ಬೇಡಿಕೆ ಇದೆ. ಕೂಡಲೇ ರಾಜ್ಯ ಸರಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಪ್ರಕಾಶ ಭೋಪಳೆ, ಉಪಾಧ್ಯಕ್ಷ ಪ್ರಕಾಶ ಮಹಾಗಾಂವಕರ, ಇಂದ್ರಾ ಜಾನವೇಕರ, ಮಹಾನಂದಾ ಘೋಡಕೆ, ವಿದ್ಯಾ ಘೋಡಕೆ, ಛಾಯಾ ಪ್ರಭಾವಳೆ, ಶಾಲನ ಬೆಳಗಾಂವಕರ, ಉದಯ ಕಾಳಗೆ, ಸಿದ್ದು ಬೇನಾಡಿಕರ, ಉದಯ ಘೋಡಕೆ, ಪ್ರಕಾಶ ಗಾಯಕವಾಡ ಸುದ್ದಿಗೋಷ್ಠಿಯಲ್ಲಿದ್ದರು.

loading...