ಕರವೇ ತಾಲೂಕಾಧ್ಯಕ್ಷರಾಗಿ ಬಸವರಾಜ ಬೆಂಡಿಗೇರಿಮಠ ಆಯ್ಕೆ

0
38
loading...

ಹಳಿಯಾಳ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡಾ ಬಣದ ಹಳಿಯಾಳ ತಾಲೂಕಾ ಶಾಖೆಯನ್ನು ಆರಂಭಿಸಲಾಗಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಅವರ ಉಪಸ್ಥಿತಿಯಲ್ಲಿ ಬುಧವಾರ ತಾಲೂಕಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನೆರವೇರಿತು. ಹಳಿಯಾಳ ಪಟ್ಟಣದ ಯುವ ಉದ್ಯಮಿ ಹಾಗೂ ಉತ್ಸಾಹಿ ಸಾಮಾಜಿಕ ಕಾರ್ಯಕರ್ತ ಬಸವರಾಜ ಶಂಕ್ರಯ್ಯಾ ಬೆಂಡಿಗೇರಿಮಠ ಅವರನ್ನು ತಾಲೂಕಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಉಪಾಧ್ಯಕ್ಷ ಅರುಣ ಹರ್ಕಡೆ, ಜಿಲ್ಲಾ ಯುವ ಅಧ್ಯಕ್ಷ ನಾಗರಾಜ ನಾಯ್ಕ, ಹೊನ್ನಾವರ ತಾಲೂಕಾಧ್ಯಕ್ಷ ಮಂಜುನಾಥ ಗೌಡ, ಕುಮಟಾ ತಾಲೂಕಾಧ್ಯಕ್ಷ ಗಣಪತಿ ನಾಯ್ಕ ಮೊದಲಾದವರು ಆಗಮಿಸಿದ್ದರು.
ಬಸವರಾಜ ಬೆಂಡಿಗೇರಿಮಠ ಅವರ ಅಧ್ಯಕ್ಷತೆಯಲ್ಲಿರುವ ಸಮಿತಿಯಲ್ಲಿ ಪದಾಧಿಕಾರಿಗಳಾಗಿರುವ ಅಪ್ಪು (ಚನ್ನಬಸವೇಶ್ವರ) ಚರಂತಿಮಠ, ಸುಧಾಕರ ಕುಂಬಾರ, ವಿನೋದ ದೊಡ್ಮನಿ, ಶಂಕರ ಶೆಟ್ಟಿ, ವಿನಾಯಕ ಟಿ., ಚನ್ನಬಸವೇಶ್ವರ ಹಿರೇಮಠ, ಶ್ರೀಶೈಲ ಮಠದೇವರು, ಸೋಮನಗೌಡಾ ಹಟ್ಟಿಹೊಳಿ ಮೊದಲಾದವರು ಪಾಲ್ಗೊಂಡಿದ್ದರು.

loading...