ಕಾರ್ಮಿಕವರ್ಗವನ್ನು ಶೋಷಣೆ ಮಾಡುತ್ತಿದ್ದಾರೆ: ಡಾ. ರಾಧಾಕೃಷ್ಣ

0
30
loading...

ವಿಜಯಪುರ : ಕೇವಲ ಶೇ.1 ರಷ್ಟಿರುವ ಬಂಡವಾಳಶಾಹಿಗಳು ಶೇ.99 ರಷ್ಟಿರುವ ಕಾರ್ಮಿಕವರ್ಗವನ್ನು ಶೋಷಣೆ ಮಾಡುತ್ತಿದ್ದಾರೆ, ಪರಿಣಾಮವಾಗಿ ಪ್ರತಿಯೊಬ್ಬರು ತೊಂದರೆ ಅನುಭವಿಸುವಂತಾಗಿದೆ ಎಂದು ಎಸ್‌ಯುಸಿಐ ಕೇಂದ್ರ ಸಮಿತಿ ಸದಸ್ಯ ಡಾ.ಕೆ. ರಾಧಾಕೃಷ್ಣ ಹೇಳಿದರು.
ಕಾರ್ಮಿಕರನ್ನು ಶೋಷಣೆ ಮಾಡಿ ಮಾಲೀಕರು ಅಪಾರ ಸಂಪತ್ತನ್ನು ದೋಚುತ್ತಿದ್ದಾರೆ ಎಂದರು. ಸ್ಟಾಲಿನ್‌ ಅವರ ನೇತೃತ್ವದಲ್ಲಿ ಮನುಕುಲ ವಿರೋಧಿ, ಫ್ಯಾಸಿಸ್ಟ್‌ ಕ್ರೂರಿ ಹಿಟ್ಲರ್‌ನನ್ನು ಸೋಲಿಸಿ ಸಮಾಜವಾದದ ಪತಾಕೆಯನ್ನು ಎತ್ತಿ ಹಿಡಿದ ಕೀರ್ತಿ ಸಮಾಜವಾದಿ ರಷ್ಯಾಕ್ಕೆ ಸಲ್ಲುತ್ತದೆ. ಇಂದು ನಮ್ಮ ಭ್ರಷ್ಟಾಚಾರ, ಕಪ್ಪು ಹಣ ನಿರ್ಮೂಲನೆ ಹೆಸರಿನಲ್ಲಿ ನೋಟು ಅಮಾನ್ಯೀಕರಣ ನಿರ್ಧಾರ ಕೈಗೊಂಡರು, ಪರಿಣಾಮವಾಗಿ ಭ್ರಷ್ಟಾಚಾರ ನಿರ್ಮೂಲನೆಯಾಗುವುದು ಒಂದೆಡೆ ಇರಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ದೇಶದ ಆರ್ಥಿಕತೆ ನೆಲಕಚ್ಚಿತು. ಆದ್ದರಿಂದ ಬಂಡವಾಳಿಗರ ಪರವಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಗಳಂತಹ ಪಕ್ಷಗಳನ್ನು ಧಿಕ್ಕರಿಸಿ ಜನತೆ ಒಂದಾಗಿ ಬೃಹತ್‌ ಹೋರಾಟ ಕಟ್ಟುವ ಮೂಲಕ ಭಾರತದ ಸಮಾಜವಾದಿ ಕ್ರಾಂತಿಗೆ ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಭಿ. ಭಗವಾನರೆಡ್ಡಿ ಮಾತನಾಡಿ, ಜಗತ್ತಿನ ದುಡಿಯುವ ಜನತೆಗೆ ವಿಮುಕ್ತಿಯ ಪಥ ತೋರಿದ ಮಹಾನ್‌ ನವೆಂಬರ್‌ ಕ್ರಾಂತಿ ಜರುಗಿ ನೂರು ವರ್ಷಗಳಾದವು. ಲೆನಿನ್‌ರ ನಾಯಕತ್ವದಲ್ಲಿ ರಷ್ಯಾದೇಶದಲ್ಲಿ ನಡೆದ ಈ ಸಮಾಜವಾದಿ ಕ್ರಾಂತಿಯು ಇತಿಹಾಸದಲ್ಲಿ ಮೊದಲ ಬಾರಿಗೆ ಶೋಷಿತರನ್ನು ಅಧಿಕಾರಕ್ಕೆ ತಂದಿತು ಎಂದರು.
ಎಸ್‌ಯುಸಿಐ ಮುಖಂಡರಾದ ಬಾಳು ಜೇವೂರ, ಮಲ್ಲಿಕಾರ್ಜುನ ಎಚ್‌.ಟಿ, ಭರತ್‌ಕುಮಾರ ಎಚ್‌.ಟಿ, ಹಾಗೂ ಸಿದ್ದಲಿಂಗ ಬಾಗೇವಾಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು

loading...