ಕಾರ್ಮಿಕ ಭವನ ಮಂಜೂರು ಸಚಿವ ದೇಶಪಾಂಡೆಯವರ ಪಯತ್ನಕ್ಕೆ ಹರ್ಷ

0
16
loading...

ದಾಂಡೇಲಿ : ಬಹುಪಾಲು ಸಂಖ್ಯೆಯಲ್ಲಿ ಕಾರ್ಮಿಕರನ್ನೆ ಒಳಗೊಂಡಿರುವ ದಾಂಡೇಲಿ ನಗರಕ್ಕೆ ಅಗತ್ಯವಾಗಿ ಕಾರ್ಮಿಕ ಭವನ ಬೇಕಿದೆ ಎಂಬ ಕೂಗು ಹಾಗೂ ಬೇಡಿಕೆ ಬಹಳಷ್ಟು ವರ್ಷಗಳಿಂದಲೆ ಇದ್ದಿತ್ತು. ಈಗಿನ ನಗರ ಸಭಾ ಸದಸ್ಯ ಕೀರ್ತಿ ಗಾಂವಕರ ಕಾರ್ಮಿಕ ಭವನಕ್ಕಾಗಿ ಮನವಿಗಳ ಮೂಲಕ ಹೋರಾಟವನ್ನು ಮಾಡುತ್ತಲೆ ಬಂದಿದ್ದರು. ಇದರ ಜೊತೆ ಜೊತೆಯಲ್ಲೆ ಕಳೆದ ಮೂರು ವರ್ಷಗಳ ಹಿಂದೆಯೆ ಕಾರ್ಮಿಕ ಭವನಕ್ಕಾಗಿ ಸಚಿವ ದೇಶಪಾಂಡೆಯರಿಗೆ ಲಿಖಿತ ಮನವಿ ನೀಡಿ ಒತ್ತಾಯಿಸಿದ್ದರು.
ಮನವಿಗೆ ಸಕಾಲದಲ್ಲಿ ಸ್ಪಂದಿಸಿದ ಸಚಿವ ದೇಶಪಾಂಡೆಯವರು ರೂ: 5 ಕೋಟಿ ಮೊತ್ತದ ಕಾರ್ಮಿಕ ಭವನ ನಿರ್ಮಾಣಕ್ಕೆ ಸರಕಾರದ ಮಟ್ಟದಲ್ಲಿ ಅನುದಾನ ಮಂಜೂರಿ ಮಾಡಿದ್ದಾರೆ. ಈಗಾಗಲೆ ಸುಸಜ್ಜಿತವಾಗಿ ಕಾರ್ಮಿಕ ಭವನ ನಿರ್ಮಾಣಕ್ಕೆ ಎಲ್ಲ ತಯಾರಿ ನಡೆದಿದೆ. ನಿರ್ಮಾಣಗೊಳ್ಳಲಿರುವ ಕಾರ್ಮಿಕ ಭವನದ ನೀಲ ನಕ್ಷೆ ಸಿದ್ದವಾಗಿ ಅಂತಿಮವಾಗಿ ಇದೇ ಅಕ್ಟೋಬರ್‌ 30 ರಂದು ಅಡಿಗಲ್ಲು ಸಮಾರಂಭವು ನಡೆಯಲಿದೆ. ರೂ.5 ಕೋಟಿ ಮೊತ್ತದಲ್ಲಿ ನಿರ್ಮಾಣಕ್ಕೆ ಅಣಿಯಾಗಿರುವ ಕಾರ್ಮಿಕ ಭವನ 16 ಸಾವಿರ ಚದರ ಅಡಿಯ ಸಭಾಭವನ ಮತ್ತು 2500 ಚದರ ಅಡಿಯ ಅಂಗಡಿ ಮಳಿಗೆಗಳನ್ನು ಹೊಂದಲಿದೆ. 300 ಜನರಿಗೆ ಕುಳಿತುಕೊಳ್ಳಬಹುದಾದ ಸಭಾಭವನ, 200 ಜನರಿಗೆ ಕುಳಿತುಕೊಳ್ಳಬಹುದಾದ ಊಟದ ಹಾಲ್‌, ಶೌಚಾಲಯ, ಸ್ನಾನಗೃಹ, 4 ಹಸಿರು ಕೊಠಡಿಗಳು, 4 ಅಂಗಡಿ ಮಳಿಗೆಗಳು, ಕಾರ್ಮಿಕ ಕಛೇರಿ ಹೀಗೆ ಮೊದಲಾದ ಕಟ್ಟಡಗಳು ಈ ಕಾರ್ಮಿಕ ಭವನದಲ್ಲಿ ಸ್ಥಾನ ಪಡೆದಿವೆ. ಅತ್ಯಂತ ಸುಂದರ ಶೈಲಿಯ ಅತ್ಯಾಧುನೀಕ ತಂತ್ರಾಜ್ಞಾನವನ್ನು ಆಳವಡಿಸಿರುವ ಈ ಕಟ್ಟಡ ನಗರದ ಪ್ರಗತಿಗೆ ಹೊಸ ಆಯಾಮ ನೀಡಲಿದೆ ಎಂಬ ಮಾತು ಕೇಳಿಬರುತ್ತಿದೆ.
ಕೀರ್ತಿ ಗಾಂವಕರ ಹರ್ಷ: ನಗರಕ್ಕೆ ರೂ:5 ಕೋಟಿ ಮೊತ್ತದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಕಾರ್ಮಿಕ ಭವನವನ್ನು ಮಂಜೂರು ಮಾಡಿದ ಸಚಿವ ದೇಶಪಾಂಡೆಯವರನ್ನು ನಗರ ಸಭಾ ಸದಸ್ಯ ಕೀರ್ತಿ ಗಾಂವಕರ ಅವರು ಅಭಿನಂದಿಸಿದ್ದಾರೆ. ಕಾರ್ಮಿಕ ಭವನಕ್ಕಾಗಿ ಸಚಿವ ದೇಶಪಾಂಡೆಯವರಿಗೆ ಮನವಿ ನೀಡಿ ವಿನಂತಿಸಲಾಗಿತ್ತು. ನಮ್ಮ ಮನವಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ ಸಚಿವರ ಕಾರ್ಯಕ್ಕೆ ಕಾರ್ಮಿಕ ವಲಯದಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಕೀರ್ತಿ ಗಾಂವಕರ ಪತ್ರಿಕೆಗೆ ತಿಳಿಸಿದ್ದಾರೆ.

loading...