ಕಿತ್ತೂರು ಉತ್ಸವದ ಅಂಗವಾಗಿ ಕೋಟೆಯಲ್ಲಿ ಸ್ವಚ್ಚತೆ ಕಾರ್ಯಕ್ರಮ

ಕಿತ್ತೂರು ಉತ್ಸವದ ಅಂಗವಾಗಿ ಕೋಟೆಯಲ್ಲಿ ಸ್ವಚ್ಚ ಕಾರ್ಯಕ್ರಮ
loading...

ಕನ್ನಡಮ್ಮ ಸುದ್ದಿ.ಚನ್ನಮ್ಮ ಕಿತ್ತೂರು
ದಿ. 23, 24 ಮತ್ತು 25 ರಂದು ಐತಿಹಾಸಿಕ ಕಿತ್ತೂರು ಉತ್ಸವದ ಅಂಗವಾಗಿ ಐತಿಹಾಸಿಕ ಕೋಟೆಯನ್ನು ಸ್ವಚ್ಚ ಭಾರತ ಅಭಿಯಾನದಡಿ ಬೈಲಹೊಂಗಲ ಉಪವಿಭಾಗದ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪೌರ ಕಾರ್ಮಿಕರು ಕಿತ್ತೂರು ಕೋಟೆಯನ್ನು ಸ್ವಚ್ಛಗೊಳಿಸುವ ಮಹತ್ತರ ಕಾರ್ಯವನ್ನು ಸೋಮವಾರ ಕೈಗೊಂಡರು.
ಕಿತ್ತೂರು ಉತ್ಸವ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಕೋಟೆ ಆವರಣದಲ್ಲಿ ಕಸ, ಗೋಡೆಯ ಮೇಲೆ ಎಲ್ಲಿಬೇಕೆಂದರಲ್ಲಿ ಬೆಳೆದ ಗಿಡಗಂಟಿಗಳು ಪಾರ್ಥೇನಿಯಂ ಕಸ, ಹೆಗಲೆತ್ತರಕ್ಕೆ ಬೆಳೆದ ಕಸ ಕಡ್ಡಿ, ಪಾರ್ಥೆನಿಯಂ, ಮುಳ್ಳಿನ ಕಂಟಿ ಇವುಗಳನ್ನು ಸ್ವಚ್ಚಗೊಳಿಸಲು ಮುಂದಾದರೂ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಸ್ವಚ್ಚತೆ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು. ಆದರೆ ಕೆಲ ಅಧಿಕಾರಿಗಳನ್ನು ಹೊರತುಪಡಿಸಿ ಬಹುತೇಕ ಅಧಿಕಾರಿಗಳು ನಾಮ ಕೇ ವಾಸ್ತೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದಂತೆ ಕಂಡುಬಂದಿತು. ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳಬೇಕಾದ ಅಧಿಕಾರಿಗಳು ಗುಂಪು ಗುಂಪಾಗಿ ನಿತ್ತುಕೊಂಡು ಹರಟೆ ಹೊಡೆಯುವದರಲ್ಲಿಯೇ ಮೊಬೈಲನಲ್ಲಿ ಮಾತನಾಡುವದರಲ್ಲಿಯೇ ಕಾಲ ಕಳೆದರೂ. ಕೆಲ ಅಧಿಕಾರಿಗಳು ಗಾಂಧಿ ಜಯಂತಿ ಆಚರಿಸಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಂತೆ ಅರ್ಧದಷ್ಟು ಅಧಿಕಾರಿಗಳು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳದೆ ಅಲ್ಲಿಂದ ಕಾಲಕ್ಕಿತ್ತರು ಇದನೆಲ್ಲ ಗಮನಿಸಿದ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದರು.
ಕಳೆದ ವರ್ಷದ ಉತ್ಸವದಲ್ಲಿ ಇಡೀ 23 ಎಕರೆ ಕೋಟೆ ಆವರಣವನ್ನು ಉತ್ಸವದ ಒಂದು ತಿಂಗಳು ಮುಂಚೆಯೇ ಆರಂಭಿಸಿ ಸ್ವಚ್ಚತೆ ಕೈಗೊಂಡು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರೂ.

ಸದ್ಯ ಶೇ.20 ರಷ್ಟು ಭಾಗ ಮಾತ್ರ ಈ ದಿನ ಸ್ವಚ್ಛಗೊಳಿಸಲಾಯಿತು. ಇನ್ನೂ ಶೇ. 80 ರಷ್ಟು ಸ್ವಚ್ಛತಾ ಕಾರ್ಯ ನಡೆಯಬೇಕಿದೆ. ವರ್ಷಕ್ಕೆ ಒಮ್ಮೆಯೇ ಉತ್ಸವದ ನೆಪದಲ್ಲಿ ಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಬದಲು ಕಾಯಂ ಆಗಿ ಸ್ವಚ್ಚತಾ ಕಾರ್ಯಕ್ಕೆ ಸಿಬ್ಬಂದಿಗಳನ್ನು ನೇಮಿಸಲು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಬೇಕಿದೆ.

ಸ್ವಚ್ಛತಾ ಕಾರ್ಯಕ್ರಮದ ಮೊದಲು ಶಾಸಕ ಡಿ.ಬಿ. ಇನಾಮದಾರ, ಮಹತ್ಮಾ ಗಾಂಧೀ ಮತ್ತು ಲಾಲಬಹದೂರ ಶಾಸ್ತ್ರೀ ಜಯಂತಿ ನಿಮಿತ್ಯ ಮಹಾತ್ಮರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು. ಕಿತ್ತೂರು ಉತ್ಸವ ಉಪವಿಭಾಗಾಧಿಕಾರಿ ವಿಜಯಕುಮಾರ ಕೊನಕೇರಿ, ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ, ಪ್ರಕಾಶ ಗಾಯಕವಾಡ, ಪಪಂ ಅಧ್ಯಕ್ಷ ಹನೀಫ್ ಸುತಗಟ್ಟಿ, ಉಪಾಧ್ಯಕ್ಷ ಕಿರಣ ವಾಳದ ಮುಖ್ಯಾಧಿಕಾರಿ ಐ.ಕೆ.ಗುಡದಾರಿ, ಕಾರ್ಯನಿರ್ವಾಹಕ ಅಧಿಕಾರಿ ಭೀಮಾನಾಯ್ಕ, ಸಂಜೀವ ಲೋಕಾಪೂರ, ಕ್ಯುರೇಟರ ರಾಘವೇಂದ್ರ ಸೇರಿದಂತೆ ವಿಭಾಗದ ಅಧಿಕಾರಿಗಳು ಪೌರ ಕಾರ್ಮಿಕರು, ಶಾಲಾ ಮಕ್ಕಳು, ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದರು.

loading...