ಕಿತ್ತೂರು ಉತ್ಸವ ಉದ್ಘಾಟಕರಾಗಿ ಕೇಂದ್ರ ಸಚಿವ ಹೆಗಡೆ: ಶಾಸಕ ಇನಾಮದಾರ ಜಿಲ್ಲಾಡಳಿತಕ್ಕೆ ಸೂಚನೆ

0
33
loading...

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರುಃ ನಮ್ಮ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಕೇಂದ್ರ ಸಚಿವರಾಗಿದ್ದು, ಕಿತ್ತೂರು ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸಲು ಶಾಸಕ ಡಿ ಬಿ. ಇನಾಮದಾರ ಜಿಲ್ಲಾ ಆಡಳಿತಕ್ಕೆ ಸೂಚಿಸಿದರು.
ಅ 23 ರಿಂದ ನಡೆಯಲಿರುವ ಐತಿಹಾಸಿಕ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ ಪಟ್ಟಣದ ವೀರಭದ್ರೇಶ್ವರ ಸಭಾ ಭವನದಲ್ಲಿ ನಡಯಿತು ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಉತ್ಸವದಲ್ಲಿ ಆಹ್ವಾನದ ಕುರಿತು ಗೊಂದಲು ಉಂಟಾಗಿತ್ತು. ಅದರೆ ಈ ಭಾರಿ ಉತ್ಸವಕ್ಕೆ ಯಾವುದೇ ಚುತಿ ಬರದಂತೆ, ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಠಾಚಾರವನ್ನು ಪಾಲಿಸಿಸಲು ಕಡಕ್ಕಾಗಿ ಸೂಚಿಸಿದರು. ಸಚಿವರ ನೇತೃತ್ವದಲ್ಲಿ ಉತ್ಸವ ನಡೆಯಲಿ. ಕಿತ್ತೂರು ಉತ್ಸವಕ್ಕೆ ಎಲ್ಲರನ್ನು ಆಹ್ವಾನಿಸಿ. ಜಿಲ್ಲಾ ಉಸ್ತವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಸಚಿವರು ಉತ್ಸವಕ್ಕೆ ಅಗತ್ಯವಿರುವ ಅನುದಾನವನ್ನು ಸರಕಾರದಿಂದ ಕೊಡೆಯಿಸಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಕಿತ್ತೂರು ನಾಡಿನ ಹೋರಾಟಗಾರರ ಸ್ವಾಭಿಮಾನದ ಉತ್ಸವವಾಗಬೇಕು ಈ ನಿಟ್ಟಿನಲ್ಲಿ ಜನತೆಯ ಸಹಕಾರ ಅಗತ್ಯವಾಗಿದೆ.
ಅಧ್ಯಕ್ಷೆ ಶೈಲಾ ಬಸನಗೌಡ ಸಿದ್ರಾಮನಿ, ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ, ಡಿ.ವೈ.ಎಸ್ಪಿ ಕರುಣಾಕರ ಶೆಟ್ಟಿ, ಜಿಲ್ಲಾ ಆಹಾರ ಉಪ ನಿರ್ದೇಶಕಿ ಎಸ್‌.ಎ.ಬಳ್ಳಾರಿ, ತಹಸೀಲ್ದಾರಾದ ಪ್ರಕಾಶ ಗಾಯಕವಾಡ, ಪ್ರವೀಣ ಹುಚ್ಚಣ್ಣವರ, ಪಟ್ಟಣ ಪಂಚಾಯತಿ ಅಧ್ಯಕ್ಷ ಹನೀಪ ಸುತ್ತಗಟ್ಟಿ, ಉಪಾಧ್ಯಕ್ಷ ಕಿರಣ ವಾಳದ, ಜಿಲ್ಲಾ ಪಂಚಾಯತಿ ಸದಸ್ಯೆ ರಾಧಾ ಕಾದ್ರೋಳ್ಳಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು.

loading...