ಕುಟುಂಬ ಕಲ್ಯಾಣ ಯೋಜನೆಗಳ ತರಬೇತಿ ಕಾರ್ಯಾಗಾರ

0
28
loading...

ಯರಗಟ್ಟಿ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಗರ್ಭನಿರೋಧಕ ವಿಧಾನಗಳ ಮತ್ತು ವಿವಿಧ ಕುಟುಂಬ ಕಲ್ಯಾಣ ಯೋಜನೆಗಳ ತರಬೇತಿ ಕಾರ್ಯಾಗಾರವನ್ನು ಜರುಗಿತು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಪಿ ಬೆಂಡಿಗೇರಿ ಮಾತನಾಡಿ, ಬಾಲ್ಯವಿವಾಹ ಅಪಾಯಕಾರಿ ಪದ್ದತಿ ಎಳೆಯ ವಯಸ್ಸಿನ ಮಕ್ಕಳಿಗೆ ತಾಯಂದಿರ ಮರಣ ಶಿಶುಮರಣ ಅಪೌಷ್ಠಿಕತೆಯನ್ನುಂಟು ಮಾಡುವದು. ಬಾಲ್ಯ ವಿವಾಹವೆಂದರೆ 21 ವರ್ಷದೋಳಗಿನ ಹುಡುಗ ಹಾಗೂ 18 ವರ್ಷದೋಳಗಿನ ಹುಡುಗಿ ಇವರ ನಡೆಯುವ ಮದುವೆಯಾಗಿದೆ. ಆದ್ದರಿಂದ ಬಾಲ್ಯವಿವಾಹ ತಡೆಯುವದು. ಮದುವೆಯಾದ ನಂತರ ಮಕ್ಕಳನ್ನು ತಡವಾಗಿ ಪಡೆಯುವದು. ಒಂದು ಮಗುವಿನ ನಂತರ ಕನಿಷ್ಟ 3 ವರ್ಷಗಳ ಅಂತರ ಇಡುವದು. ಎರಡು ಮಕ್ಕಳ ನಂತರ ಕಡ್ಡಾಯವಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವದು. ಹಿಗೆ ಏರುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಮಕ್ಕಳ ನಡುವೆ ಅಂತರವಿಟ್ಟು ಚಿಕ್ಕ ಕುಟುಂಬ ಹೊಂದುವದರಿಂದ ಸುಖಿ-ಸಂತೋಷಕರ ಜೀವನ ನಡೆಸಬಹುದು ಎಂದು ಹೇಳಿದರು.
ಯರಗಟ್ಟಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್‌ ಗಂಜಿ ಮಾತನಾಡಿ, ಮಕ್ಕಳ ನಡುವೆ ಅಂತರವಿಡಲು ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳಾದ ಸ್ತ್ರೀಯರಿಗಾಗಿ ಇರುವ ನುಂಗುವ ಮಾತ್ರೆ ಕಾಪರ್‌ ಟಿ ಪುರುಷರಿಗಾಗಿ ನಿರೋಧ. ಬ್ರಹ್ಮಚರ್ಯ ಪಾಲಿಸುವದು ಹಾಗೂಸ್ತ್ರೀಯರಿಗಾಗಿ ಇರುವ ಶಾಶ್ವತ ವಿದಾನಗಳಾದ ಟುಬೆಕ್ಟಮಿ, ಲೆಪ್ರೊಸ್ಕೊಪಿ ಪುರಿಷರಿಗಾಗಿ ಎನ್‌ ಎಸ್‌ ವಿ ವಿಧಾನಗಳ ಬಳಕೆಯ ಕುರಿತು ತಿಳಿಸಿದರು.
ಹೊಸೂರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಸ್‌ ಎಂ ಅಂಗಡಿ ಮಾತನಾಡಿದರು, ಡಾ ಶ್ರೀಮತಿ ಬಿ ಎಸ್‌ ಬಳ್ಳೂರ ಮುಖ್ಯ ವೈಧ್ಯಾಧಿಕಾರಿಗಳು ಆಧ್ಯಕ್ಷತೆ ವಹಿಸಿದ್ದರು ಎಂ ಟಿ ಕುಂಬಾರ ಹಾಗೂ ಯರಗಟ್ಟಿ , ಮದ್ಲೂರ, ತಲ್ಲೂರ, ಯಕ್ಕುಂಡಿ, ಹೊಸೂರ, ಮುರಗೋಡ, ಕಡಬಿ ಆಶಾ ಕಾರ್ಯಕರ್ತೆಯರು ಹಾಜರಿದ್ದರು ಎಂ ಟಿ ಕುಂಬಾರ ಕಾರ್ಯಕ್ರಮದ ನಿರೂಪಣೆ ಮಾಡಿ ಶ್ರೀಮತಿ ಸುನಂದಾ ಸ್ವಾಗತಿಸಿ ವಂದಿಸಿದರು.

loading...