ಕೆ.ಬಿ.ಕೋಳಿವಾಡ ಅವರ ಜನ್ಮದಿನ ನ.5ಕ್ಕೆ

0
28
loading...

ರಾಣೇಬೆನ್ನೂರ: ನ.1ರಂದು ನಡೆಯಬೇಕಾಗಿದ್ದ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಜನ್ಮದಿನವನ್ನು ಮುಖ್ಯಮಂತ್ರಿಗಳ ಪಾಲ್ಗೊಳ್ಳುವಿಕೆ ಹಿನ್ನೆಲೆಯಲ್ಲಿ ನ.5ಕ್ಕೆ ಮುಂದೂಡಲಾಗಿದೆ ಎಂದು ಕೆ.ಬಿ.ಕೋಳಿವಾಡ ಅಭಿಮಾನಗಳ ಪರವಾಗಿ ಬಸಣ್ಣ ಮರದ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇ ದಿನ ಮುಖ್ಯಮಂತ್ರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡುವರು. ಕೋಳಿವಾಡರ ಜನ್ಮದಿನದ ಅಂಗವಾಗಿ ಈ ಬಾರಿ 101 ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ 50ಕ್ಕೂ ಅಧಿಕ ಜೋಡಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. ನ.4ರಂದು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಸಿರಿಗೆರೆ ಬ್ರಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯರ ಸಾನ್ನಿಧ್ಯ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಉಪಸ್ಥಿತಿಯಲ್ಲಿ ಮುದೇನೂರ ಬಳಿಯ ತುಂಗಭದ್ರಾ ನದಿಯಿಂದ ಚಳಗೇರಿ, ಕರೂರ, ಹುಣಸಿಕಟ್ಟಿ ಹಾಗೂ ನಗರದ ದೊಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ಇದಲ್ಲದೆ ತಾಲೂಕಿನ ವಿವಿಧ ಭಾಗಗಳ 125 ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಗುವುದು ಎಂದರು.
ಪ್ರಕಾಶ ಜೈನ್, ಪುಟ್ಟಪ್ಪ ಮರಿಯಮ್ಮನವರ, ಕೃಷ್ಣಪ್ಪ ಕಂಬಳಿ, ಸಣ್ಣತಮ್ಮಪ್ಪ ಬಾರ್ಕಿ ಸುದ್ದಿಗೋಷ್ಟಿಯಲ್ಲಿ ಇದ್ದರು.

loading...