ಕೊಲ್ಲೂರು ಮೂಕಾಂಬಿಕೆಗೆ ಒಂದು ತಿಂಗಳಿಗೆ ಬಂದಕಾಣಿಕೆ ಎಷ್ಟು ಗೊತ್ತೇ…?

0
38
loading...

ಉಡುಪಿ:- ಅಕ್ಟೋಬರ್ ತಿಂಗಳು ಒಂದರಲ್ಲಿಯೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ 1,10,66,278 ರೂಪಾಯಿ ಆದಾಯ ಬರುವ ಮೂಲಕ ಅತಿ ಹೆಚ್ಚಿನ ಗಳಿಕೆಯ ದೇವಸ್ಥಾನ ಎಂಬ ದಾಖಲೆಗೆ ಪಾತ್ರವಾಗಿದೆ.
ದೇವಸ್ಥಾನದ ಹುಂಡಿಗೆ ಕಳೆದ 18 ತಿಂಗಳು ಹಿಂದೆ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯ ಬಂದು ದಾಖಲೆಯಾಗಿತ್ತು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಈ ತಿಂಗಳ 1ರಿಂದ 24ರವರೆಗೆ ಹುಂಡಿಗೆ 1,10.66,278 ಕೋಟಿ ರೂಪಾಯಿ ಬಂದರೆ ಭಕ್ತರು 870 ಗ್ರಾಂ ಚಿನ್ನ, 3.2 ಕೆಜಿ ಬೆಳ್ಳಿ ದಾನ ನೀಡಿದ್ದಾರೆ. ಇದುವರೆಗೆ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚಿನ ಆದಾಯ ಇದಾಗಿದೆ.

loading...