ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಉದ್ಘಾಟನೆ

0
33
loading...

ಇಂಡಿ: ತಾಲೂಕಿನ ಕೊಟ್ನಾಲದ ಕೋಟೆ ಸಂಗೊಳಿ ರಾಯಣ್ಣನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿದಾಯಕವಾಗಿದ್ದು. ಅದು ತಾಲೂಕಿಗೆ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದು ಜೆಡಿಎಸ್‌ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ ಹೇಳಿದರು.
ಇಂಡಿ ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಉದ್ಘಾಟನೆ ಹಾಗೂ ನಂದಗಡದಿಂದ ಆಗಮಿಸಿದ ಜ್ಯೋತಿಯನ್ನು ಸ್ವಾಗತ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರ. ಅಂದು ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಇಂದು ಪ್ರಸುತ್ತ ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ದೇಶಾಭಿಮಾನದ ಕೊರತೆ, ಜಾತಿಯತೆ, ನಿರ್ಮೂಲನೆಗಾಗಿ ರಾಯಣ್ಣನ ಅಭಿಮಾನಿಗಳು ಸನ್ನದರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ಪ.ಪೂ ದೇವೇಂದ್ರ ಒಡೆಯರ್‌ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಮಹಾದೇವ ಪೂಜಾರಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ್‌ ಪೂಜಾರಿ, ಕುರುಬ ಸಂಘದ ಬಿಜಾಪುರ ತಾಲೂಕಾ ಅಧ್ಯಕ್ಷ ಎಂ.ಎನ್‌. ಭಾವಿಕಟ್ಟಿ, ಉಪನ್ಯಾಸಕರಾಗಿ ಎಚ್‌.ಎಲ್‌. ಜ್ಯೋತೊಪ್ಪಗೋಳ, ಪುರಸಭೆ ಸದಸ್ಯ ಸಿದ್ದು ಡಂಗಾ, ಶರಣಗೌಡ ಪಾಟೀಲ, ಶಿವಾನಂದ ಅಂಗಡಿ, ಯಲ್ಲು ಹೂಗಾರ, ಸೋಮಶೇಖರ ಅವಜಿ, ರೇವಣಸಿದ್ದ ಗೋಡಕೆ, ಹಣಮಂತ ಕಾಳೆ, ದುಂಡಪ್ಪ ಪೂಜಾರಿ, ಸಂದಪ್ಪ ಚಟ್ಟರಕಿ, ಭೀಮರಾಯ ಪೂಜಾರಿ, ಸೋಮು ಸೋಲಾಪೂರ, ಮನು ಉಪ್ಪಾರ, ಪರಶುರಾಮ ಬಗಲಿ ಇದ್ದರು. ಬಸವರಾಜ ಜಂಬಗಿ ಸ್ವಾತ ರೂಪಿಸಿದರು.

loading...