ಕ್ರೀಡಾಳುಗಳು ಪ್ರತಿಭೆ, ಮಾರ್ಗದರ್ಶನ, ಗುರಿ ಅಳವಡಿಸಿಕೊಳ್ಳಬೇಕು: ಡಾ. ಗುರುದೀಪ್

0
32
loading...

 ಕನ್ನಡಮ್ಮ ಸುದ್ದಿ-ಬೆಳಗಾವಿ: ಕ್ರೀಡೆಗೆ ಪ್ರತಿಭೆ, ಮಾರ್ಗದರ್ಶನ, ಗುರಿ ಈ ಮೂರು ಅಂಶಗಳು ಅಳವಡಿಸಿಕೊಂಡರೆ ಸ್ಪರ್ಧಾಳು ಯಶಸ್ಸುಗಳಿಸಲು ಸಾಧ್ಯ ಎಂದು ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ(ಎಐಯು)ದ ಜಂಟಿ ಕಾರ್ಯದರ್ಶಿ ಡಾ. ಗುರದೀಪ್ ಸಿಂಗ್ ಹೇಳಿದರು.
ಸೋಮವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಅಥ್ಲೇಟಿಕ್ ಫಡರೆಶನ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ (ಮಹಿಳಾ ಹಾಗೂ ಪುರುಷ) ಗುಡ್ಡಗಾಡು (ಕ್ರಾಸ್-ಕಂಟ್ರಿ) ಓಟದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಅವರದೇ ಆದ ಒಂದು ಕೌಶಲ್ಯ ರೂಢಿಸಿಕೊಂಡಿರುತ್ತಾರೆ. ಅದನ್ನು ಪಾಲಕರಾದವರು ಗುರುತಿಸಿ ಆ ಕ್ಷೇತ್ರದಲ್ಲಿಯೇ ಮುಂದುವರೆಯುವಂತೆ ಮಾಡಬೇಕು ಅಂದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಅಲ್ಲದೇ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಅವರಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಹಲವಾರು ಸೌಲಭ್ಯದ ಜೊತೆಗೆ ಸರ್ಕಾರಿ ಹುದ್ದೆ ಪಡೆಯುವಲ್ಲಿ ಸಹಾಯಕಾರಿಯಾಗುತ್ತದೆ. ಹಾಗಾಗಿ ದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವುದಕ್ಕೋಸ್ಕರ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಕ್ರೀಡೆಯಲ್ಲಿ ಯಶಸ್ಸು ಕಾಣಬೇಕು ಎಂದು ಕ್ರೀಡಾಳುಗಳಿಗೆ ಸಲಹೆ ನೀಡಿದರು.
ಆ0ಧ್ರ ಪ್ರದೇಶ ಸರ್ಕಾರದ ಕ್ರೀಡಾ ಇಲಾಖೆ ಮಾಜಿ ಸಲಹೆಗಾರರಾದ ಡಾ. ಚಿನ್ನಸ್ವಾಮಿ ರೆಡ್ಡಿ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಕ್ರೀಡೆಯಲ್ಲಿ ಉನ್ನತ ಸ್ಥಾನ ಪಡೆಯುವ ಮೂಲಕ ಕಾಲೇಜು, ವಿಶ್ವವಿದ್ಯಾಲಯಕ್ಕೆ ಹೆಸರು ತಂದುಕೊಡಬೇಕು ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ತೆಗೆದುಕೊಂಡರೆ ಅದನ್ನು ಆತ್ಮಸ್ಥೈರ್ಯದಿಂದ ಗುರಿ ಮುಟ್ಟುವ ತನಕ ಪ್ರಯತ್ನವನ್ನು ಸ್ಥಗಿತಗೊಳಿಸಬಾರದು ಎಂದು ಕ್ರೀಡಾಳುಗಳಿಗೆ ಕೀವಿಮಾತು ಹೇಳಿದರು.
ಈ ಸಂದರ್ಭದಲ್ಲಿ 10 ಕೀ.ಮಿ ಗುಡ್ಡಗಾಡು ಸ್ಪರ್ಧೆಯಲ್ಲಿ ಭಾಗವಹಿಸಿದ ಪುರುಷರ ವಯಕ್ತಿಕ ವಿಭಾಗದಲ್ಲಿ 1 ರಿಂದ 6 ರವರೆಗೆ ಅರ್ಹತೆ ಪಡೆದ ಕ್ರೀಡಾಳುಗಳಾದ ಪಂಜಾಬ್ ವಿಶ್ವವಿದ್ಯಾಲಯದ ರಂಜೀತ್ ಕುಮಾರ, ಸಾವಿತ್ರಿ ಬಾಯಿ ಪುಲೆ ವಿವಿಯ ತಡ್ವಿ ಕಿಸಾನ, ಮಂಗಳೂರು ವಿವಿಯ ರಂಜೀತಕುಮಾರ ಪಾಟೀಲ, ಪಂಜಾಬಿ ವಿವಿಯ ವಿಷ್ನುವೀರ ಸಿಂಗ್, ಮಂಗಳೂರು ವಿವಿಯ ಕುಂಬಾರ ಕಂಟಿಲಾಲ್ ದೇವರಾಮ್, ರಾಬಿನ್ ಸಿಂಗ್.
ಮಹಿಳೆಯರ ವಯಕ್ತಿಕ ವಿಭಾಗದಲ್ಲಿ ಸಾವಿತ್ರಿ ಬಾಯಿ ಪುಲೆ ವಿವಿಯ ಜಾದವ್ ಸಂಜೀವಿನಿ, ಕುರುಕ್ಷೇತ್ರ ವಿವಿಯ ವರ್ಷಾ ದೇವಿ, ದೀನ ದಯಾಳ ಉಪಾಧ್ಯಯ ವಿವಿಯ ಡಿಂಪಲ್ ಸಿಂಗ್, ಕ್ಯಾಲಿಕಟ್ ವಿವಿಯ ಚೈತ್ರಾ ಪಿ.ಯು., ಮಂಗಳೂರು ವಿವಿಯ ಪಾಟೀಲ ಆರತಿ ದತ್ತಾತ್ರಯ, ದೀನ ದಯಳ ಉಪಾಧ್ಯಯ ವಿವಿಯ ಪೂಲನ್ ಪಾಲ್ ಪದಕ ಮತ್ತು ಸಿಲ್ಡ್ ನೀಡಿ ಗೌರವಿಸಿದರು.
ಮಹಿಳೆಯರ ಗುಂಪು ವಿಭಾಗದಲ್ಲಿ ವೀರಾಗ್ರಣಿಯಾದ ದೀನ ದುಯಾಳ್ ಉಪಾಧ್ಯಯ ವಿವಿ, ಮಹತ್ಮಾ ಗಾಂಧಿ ವಿವಿ, ಮಂಗಳೂರು ವಿವಿಗಳ ಸ್ಪರ್ಧಾಳುಗಳಿಗೆ ಮೆಡಲ್ ಮತ್ತು ಪದಕಗಳನ್ನು ನೀಡಿದರು.
ಸಮಗ್ರವೀರಾಗ್ರಣಿ ಗರಿಯನ್ನು ಮಂಗಳೂರು ವಿಶ್ವವಿದ್ಯಾಲಯ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ರಾಕೇಶ ಗುಪ್ತಾ, ವಿಟಿಯುನ ದೈಹಿಕ ಶಿಕ್ಷಣದ ನಿರ್ದೇಶಕ ಡಾ. ಆರಿಫ್ ಖಾನ್, ಮೌಲ್ಯಮಾಪನ ಕುಲಸಚಿವ ಡಾ. ಸತೀಶ ಅಣ್ಣಿಗೇರಿ, ವಿವಿಧ ವಿಶ್ವವಿದ್ಯಾಲಯಗಳ ದೈಹಿಕ ನಿರ್ದೇಶಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ವಿವಿಟಿಯುನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.
ವಾಣೀಶ್ರೀ ಮತ್ತು ಡಾ. ದೀಪ್ತಿ ನಿರೂಪಿಸಿದರು. ವಿಟಿಯು ಕುಲಸಚಿವ ಡಾ. ಎಚ್ ಎನ್. ಜಗನ್ನಾಥ ರೆಡ್ಡಿ ಸ್ವಾಗತಿಸಿದರು. ಹಣಕಾಸು ಅಧಿಕಾರಿ ಎಮ್ ಎ. ಸ್ವಪ್ನಾ ವಂದಿಸಿದರು.

loading...