ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ: ಶಿವಾನಂದ

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಕ್ರೀಡಾಕೂಟಕ್ಕೆ ಹೆಚ್ಚಿನ ಒತ್ತು ನೀಡುವುದರಿಮದ ಮಕ್ಕಳ ಸರ್ವತೋಮುಖ ಬೆಳವಣಿಯಾಗುತ್ತದೆ. ಇವತ್ತಿನ ಯುವಕರು ಮೊಬೈಲ್‍ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮೊಬೈಲ್‍ನಲ್ಲಿ ಅನಾವಶ್ಯಕ ಸಮಯ ಹಾಳು ಮಾಡಿದೇ ಕ್ರೀಡೆಯಲ್ಲಿ ಆಸಕ್ತಿ ವಹಿಸುವಂತೆ ಅಂತರಾಷ್ಟೀಯ ಅಥ್ಲೆಟಿಕ್ ತರಬೇತಿದಾರ ಐ.ಎ ಶಿವಾನಂದ ಹೇಳಿದರು.
ಬಧುವಾರ ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೆಎಲ್‍ಇ ವಿಶ್ವವಿದ್ಯಾಲಯದ ಹೂಮ್ಮ ಬೋ 2017 ಅಥ್ಲೆಟಿಕ್ ಮಿಟ ಕ್ರೀಡೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿವೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರದಿಂದ ಎಲ್ಲ ರೀತಿ ಸಹಾಯ ಸಿಗುತ್ತಿದೆ. ಕ್ರೀಡಾಕೂಟದಲ್ಲಿ 16 ರಿಂದ 19 ವರ್ಷದೊಳಗಿನ ಮಕ್ಕಳ ಹೆಚ್ಚಿನ ಗಮನಹರಿಸಬೇಕೆಂದು ಸಲಹೆ ನೀಡಿದರು.
ಕೆಎಲ್‍ಇ ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾಹೊಜೀ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಹೂಮ್ಮ ಬೋ 2017 ಕ್ರೀಡಾಕೂಟ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಗೆ ಅಂತರಾಷ್ಟ್ರೀಯ ತರಬೇತಿದಾರ ಐ.ಎ ಶಿವಾನಂದ ಆಗಮಿಸಿರುವುದು ತುಂಬಾ ಖುಷಿ ತಂದಿದೆ. ಅಥ್ಲೆಟಿಕ್ ಮಿಟನಲ್ಲಿ 450 ಕಾಲೇಜ ವಿದ್ಯಾರ್ಥಿಗಳ ಭಾಗವಹಿಸಿದ್ದಾರೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ಮಾಡಲಾಗುವುದು ಎಂದು ಹೇಳಿದರು.
ಕಳೆದ ಅಗಸ್ಟ್ ಸಪ್ಟೆಂಬರ್ ತಿಂಗಳಲ್ಲಿ ಕೆಎಲ್‍ಇ ವಿಶ್ವವಿದ್ಯಾಲಯದ 8 ಕಾಲೇಜ ವಿದ್ಯಾರ್ಥಿಗಳ ನಡುವೆ ನಡೆದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪದಕ ವಿತರಿಸಿದರು.
ಈ ಸಂದರ್ಭದಲ್ಲಿ ಕೆಎಲ್‍ಇ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿ.ಡಿ ಪಾಟೀಲ, ಪ್ರಿನಿಪಲ್ ನಿರ್ದೇಶಕ ರವಿಂದ್ರ ಖೋತ, ರಜೀತ್ ಕಾಗಲೇ ಮತ್ತು ಅತುಲ್ ಸಿರೋಳಿ ಮತ್ತಿತರರು ಉಪಸ್ಥಿತರಿದ್ದರು.

loading...