ಕ್ಲಾಸಿಕ್ ಕೆಎಎಸ್ ಹಾಗೂ ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆ ಎದುರು ಪ್ರತಿಭಟನೆ

0
63
loading...

ಧಾರವಾಡ- ಕ್ಲಾಸಿಕ್ ಕೆಎಎಸ್ ಹಾಗೂ ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯು ಕೋಚಿಂಗ್ ಬಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಆರೋಪಿಸಿ ಸಪ್ತಾಪುರ ಕಚೇರಿ ಬಳಿ ಸಂಸ್ಥೆಯ ವಿರುದ್ಧ ಕೆಲ ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ಮಾಡಿದರು.
ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿ, ಹೆಚ್ಚಿನ ಮಾರ್ಗದರ್ಶನಕ್ಕಾಗಿ ಬಂದಿದ್ದ ಪರಸ್ಥಳದ ಅಭ್ಯರ್ಥಿಗಳು, (ಬಿ.ಎಡ್ ಪದವೀಧರರು) ಸಂಸ್ಥೆ ನಮ್ಮಿಂದ ದುಬಾರಿ ಹಣವನ್ನು ಕಟ್ಟಿಸಿಕೊಂಡು, ಸರಿಯಾದ ಸಮಯಕ್ಕೆ ಪಠ್ಯಕ್ರಮವನ್ನು ಮುಗಿಸಿಲ್ಲ. ಶಿಕ್ಷಕ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಮೂರನೇ ಪತ್ರಿಕೆಯ ಬಗ್ಗೆ ಪಾಠ ಮಾಡದೇ ಕಾಲಹರಣ ಮಾಡಿದ್ದಾರೆ. ಇದರಿಂದ ದೂರ ದೂರಿನಿಂದ ಬಂದು ಕೋಚಿಂಗ್ ಪಡೆಯುತ್ತಿರುವ ನಮಗೆ ಹಣ ಹಾಗೂ ಸಮಯ ವ್ಯರ್ಥವಾಗಿದೆ. ಅಲ್ಲದೇ ಪಾಠ ನಡೆಯುವ ಸ್ಥಳಗಳಿಗೆ ಕರೆದುಕೊಂಡು ಬರಲು ಹಣ ಕಟ್ಟಿಸಿಕೊಂಡು ಸರಿಯಾದ ಬಸ್ ವ್ಯವಸ್ಥೆ ಮಾಡಿಲ್ಲ ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಸಾಕಷ್ಟು ಹಣ ತುಂಬಿಸಿಕೊಂಡು ಪರಸ್ಥಳದಿಂದ ಬಂದಿರುವ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದೆ. ಪ್ರವೇಶ ಪಡೆಯುವಾಗ ವಿದ್ಯಾರ್ಥಿಗಳಿಗೆ ಅನೇಕ ಭರವಸೆ ನೀಡುತ್ತಾರೆ ತದ ನಂತರ ಯಾವ ವಿದ್ಯಾರ್ಥಿಗಳಿಗೂ ಕಾಳಜಿ ಮಾಡುವುದಿಲ್ಲ. ಹೇಳಿದಂತೆ ನಡೆದುಕೊಳ್ಳದಿದ್ದರೇ ನಮ್ಮ ಹಣ ವಾಪಸ್ ಮರಳಿಸಿ ಎಂದು ಒತ್ತಾಯಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಸ್ಥೆಯ ನಿರ್ದೇಶಕ ಡಾ.ಲಕ್ಷ್ಮಣ ಉಪ್ಪಾರ ಅವರು, ಸೂಕ್ತ ಸಮಯಕ್ಕೆ ಪಠ್ಯಕ್ರಮ ಮುಗಿಯದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಸಂದರ್ಭದಲ್ಲಿ ಕೆಲ ಬೋಧಕರ ಕೊರತೆ ಇದ್ದದ್ದು ನಿಜ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿಮ್ಮ ಇಚ್ಚೆಯಂತೆ ಪಠ್ಯಕ್ರಮವನ್ನು ತಮಗೆ ಬೋದಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿ ಅಭ್ಯರ್ಥಿಗಳ ಮನವೊಳಿಸಲು ಪ್ರಯತ್ನಿಸಿದರು.

loading...