ಖಾನಾಪುರಕ್ಕೆ ನ. 16 ರಂದು ಪರಿವರ್ತನಾ ರ್ಯಾಲಿ

0
31
loading...

ಖಾನಾಪುರ: ಮುಂಬರುವ ನ. 2ರಿಂದ ಬಿಜೆಪಿ ರಾಜ್ಯಾದ್ಯಂತ ಪರಿವರ್ತನಾ ರ್ಯಾಲಿಯನ್ನು ಸಂಘಟಿಸಲಿದ್ದು, ನ.16ರಂದು ತಾಲೂಕಿಗೆ ರ್ಯಾಲಿ ಆಗಮಿಸಲಿದೆ ಎಂದು ಬಿಜೆಪಿ ಮುಖಂಡ ಸಂಜಯ ಕುಬಲ ಮಾಹಿತಿ ನೀಡಿದರು.
ಗುರುವಾರ ಪಟ್ಟಣದ ಪಟ್ಟಣ ಪಂಚಾಯ್ತಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರ್ಯಾಲಿಯ ಪೂರ್ವಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸಲು ಕರೆ ನೀಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ ಮಾತನಾಡಿ ರ್ಯಾಲಿಯ ಪೂರ್ವಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಯ ಬಗ್ಗೆ ಚರ್ಚಿಸಲಾಯಿತು.
ಮುಖಂಡರಾದ ವಲ್ಲಭ ಗುಣಾಜಿ, ಮಂಜುಳಾ ಕಾಪಸೆ, ವಿಠ್ಠಲ ಹಲಗೇಕರ, ಪ್ರಹ್ಲಾದ ರೇಮಾಣಿ, ಸಂಜಯ ಕಂಚಿ, ಶಿವಾನಂದ ಚಲವಾದಿ, ಅಶೋಕ ಚಲವಾದಿ, ರವಿ ಬನೋಶಿ, ವೀರೇಶ ದೇವರಮನಿ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಕಾರ್ಯಕಾರಿಣಿ ಸದಸ್ಯರು ಇದ್ದರು.

loading...