ಗದಗ ಜಿಲ್ಲೆ: ಶೇ. 15ರಷ್ಟು ಮಳೆ ಕೊರತೆ

0
33
loading...

ಗದಗ ಜಿಲ್ಲೆ: ಶೇ. 15ರಷ್ಟು ಮಳೆ ಕೊರತೆಗದಗ ಜಿಲ್ಲೆ: ಶೇ. 15ರಷ್ಟು ಮಳೆ ಕೊರತೆ ಗದಗ, ಗದಗ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಜನೇವರಿ ಮಾಹೆಯಿಂದ ಅಕ್ಟೋಬರ 7ರ ವರೆಗೆ ವಾಡಿಕೆ ಮಳೆ 536 ಮಿ.ಮೀ ವಾಡಿಕೆ ಮಳೆ ಪೈಕಿ 455 ಮಿಮಿ ಶೇಕಡಾ 85 ರಷ್ಟು ಮಳೆಯಾಗಿದ್ದು, ಶೇ.15ರಷ್ಟು ಮಳೆ ಕೊರತೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಐ.ಜೆ.ಗದ್ಯಾಳ ತಿಳಿಸಿದರು. ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ವಾಡಿಕೆಯ ಮಳೆಗಿಂದ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ (466ರ ಪೈಕಿ 497 ಮಿಮಿ) ಮಾತ್ರ ಶೇ.107ರಷ್ಟು ಮಳೆಯಾಗಿದೆ. ಉಳಿದಂತೆ ಗದಗ ಶೇ.87,  ನರಗುಂದ ಶೇ.81 ಹಾಗೂ ರೋಣ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ತಲಾ ಶೇ. 78ರಷ್ಟು ವಾಡಿಕೆ ಮಳೆ ಆಗಿದೆ. ಜಿಲ್ಲೆಯು ಮುಂಗಾರುಪೂರ್ವದಲ್ಲಿ ಶೇ. 39ರಷ್ಟು ಜೂನ ಒಂದರಿಂದ ಸೆಪ್ಟೆಂಬರ ಅಂತ್ಯದವರೆಗೆ ಶೇ.10ರಷ್ಟು ಮಳೆ ಕೊರತೆ ಆಗಿದ್ದು ಕಳೆದ ವಾರದ ಅವಧಿಯಲ್ಲಿ ಶೇ.8ರಷ್ಟು ಮಳೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ 9 ಮಾನವ ಹಾ£ ವರದಿಯಾಗಿದ್ದು ವಿಪತ್ತು ನಿರ್ವಹಣೆ ಮಾರ್ಗಸೂಚಿಗಳನ್ವಯ ಅನ್ವಯ ತಲಾ 4 ಲಕ್ಷ ರೂ. ಪರಿಹಾರ ವಿತರಿಸÀಲಾಗಿದೆ. ಗದಗ ಮತ್ತು ರೋಣ ತಾಲೂಕುಗಳಲ್ಲಿ ತಲಾ 2, ನರಗುಂದದಲ್ಲಿ 1 ಹಾಗೂ ಶಿರಹಟ್ಟಿಯಲ್ಲಿ 4 ಮಾನವ ಹಾನಿಯಾಗಿದೆ. ಗದಗ ತಾಲೂಕುದಲ್ಲಿ 37, ಮುಂಡರಗಿಯಲ್ಲಿ 4, ಗದಗ ಮತ್ತು ರೋಣ ತಾಲೂಕಲ್ಲಿ 1 ಹಾಗೂ ಶಿರಹಟ್ಟಿಯಲ್ಲಿ 7 ಒಟ್ಟು ಜಿಲ್ಲೆಯಲ್ಲಿ 49 ಜಾನುವಾರು ಹಾನಿಯಾಗಿದೆ. ಗದಗ ತಾಲೂಕಿನಲ್ಲಿ 276, ಮುಂಡರಗಿಯಲ್ಲಿ 246, ನರಗುಂದ 159 ರೋಣ 171  ಹಾಗೂ ಶಿರಹಟ್ಟಿಯಲ್ಲಿ 256 ಒಟ್ಟು ಜಿಲ್ಲೆಯಲ್ಲಿ 1,108 ಜಾನುವಾರು ಹಾನಿಯಾಗಿದೆ. ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 20 ಎಕರೆಯಷ್ಟು ಬೆಳೆ ಹಾನಿ ಸಂಭವಿಸಿರುವುದಾಗಿ ತಹಶೀಲ್ದಾರ ಮುಂಡರಗಿ ಇವರು ವರದಿ ಮಾಡಿರುತ್ತಾರೆ. ಮತ್ತು ಇತರೆ ತಾಲ್ಲೂಕಿನಲ್ಲೂ ಸಹ ಹೆಚ್ಚಿನ ಮಳೆಯಿಂದ ಬೆಳೆ ಹಾ£ ಸಂಭವಿಸಿದ್ದು ತಹಶೀಲ್ದಾರರ ವರದಿ ನಿರೀಕ್ಷಿಸಲಾಗುತ್ತಿದೆ ಶಿರಹಟ್ಟಿ ತಾಲ್ಲೂಕಿನ ದೊಡ್ಡೂರು ಗ್ರಾಮದಲ್ಲಿ ಒಂದು ಸರ್ಕಾರಿ ಶಾಲಾ ಕಟ್ಟಡದ ಮೇಲೆ ಮರ ಬಿದ್ದು ಹಾನಿಗೊಳಗಾಗಿರುತ್ತದೆ. ಅಲ್ಲದೇ ಗದಗ ತಾಲ್ಲೂಕಿನ ನಾಗಸಮುದ್ರ ಗ್ರಾಮದ ಸಮೀಪವಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವು ಮಳೆಯಿಂದ ಹಾ£ಗೊಳಗಾಗಿ ಕಾಲೇಜಿನ ಕುಡಿಯುವ ನೀರಿನ ಟ್ಯಾಂಕ ಮತ್ತು ಕಟ್ಟಡದ ಒಳಗೆ ಇರುವ ಪೀಠೋಪಕರಣ ಇತ್ಯಾದಿ ಹಾನಿಯಾಗಿರುವ ಬಗ್ಗೆ ವರದಿಯಾಗಿರುತ್ತದೆ. ಇದಲ್ಲದೇ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ, ಸೇತುವೆಗಳು ಹಾನಿಗೀಡಾಗಿದ್ದು, ಈ ಬಗ್ಗೆ ತಹಶೀಲ್ದಾರರು ಸ್ಥಾ£ಕ ಪರಿಶೀಲನೆ ವರದಿ ಪಡೆಯಲಾಗುತ್ತಿದೆ. ಎಂದು ಅಪರ ಜಿಲ್ಲಾಧಿಕಾರಿ ಗದ್ಯಾಳ ತಿಳಿಸಿದರು.      ಜಿ.ಪಂ. ಯೋಜನಾ ನಿರ್ದೇಶಕ ಟಿ.ದಿನೇಶ, ಜಂಟಿ ಕೃಷಿ ನಿರ್ದೇಶಕ ಸಿ. ಬಾಲರೆಡ್ಡಿ, ಜಿ.ಪಂ. ಯೋಜನಾಧಿಕಾರಿ ಶಂಕರ ಶಂಪೆ ಉಪಸ್ಥಿತರಿದ್ದರು.

loading...