ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತ

0
17
loading...

ಮುಂಡಗೋಡ: ಮಂಗಳವಾರ ಸಂಜೆ ಸುರಿದ ಗಾಳಿ ಮಳೆಗೆ ಪಟ್ಟಣದಲ್ಲಿ ಮರಗಳು ಹಾಗೂ ವಿದ್ಯುತ್‌ ಕಂಬಗಳು ದರೆಗುರುಳಿದ ಪರಿಣಾಮ ಕೆ¯ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಪ.ಪಂ ಆವರಣದಲ್ಲಿದ್ದ ಬೃಹತ್‌ ಎತ್ತರದ ಸಿಲ್ವರ್‌ ಮರ ವಿದ್ಯುತ್‌ ಲೈನ್‌ ಮೇಲೆ ಉರುಳಿ ಬಿದ್ದು ವಿದ್ಯುತ್‌ ಕಂಬವೊಂದು ಮುರಿದಿದೆ. ಅಲ್ಲದೇ ಬಂಕಾಪುರ ರಸ್ತೆಯಲ್ಲಿ ಟ್ರಾನ್ಸಪಾರ್ಮರ್‌ ಹೊಂದಿದ ಜೋಡಿ ವಿದ್ಯುತ್‌ ಕಂಬ ಕೂಡ ದರೆಗುರುಳುತಿತ್ತು, ತಕ್ಷಣ ಸ್ಥಳಕ್ಕೆ ದಾವಿಸಿದ ವಿದ್ಯುತ್‌ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಕಂಬವನ್ನು ಮೇಲಕ್ಕೆತ್ತಿದರು. ಇದರಿಂದಾಗಿ ಸುಮಾರು 2-3 ಘಂಟೆಗಳ ಕಾಲ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಅದೃಷ್ಟವಶಾತ ಯಾವುದೇ ಅನಾಹುತ ನಡೆದಿಲ್ಲ.

loading...