ಗೋದಾಮಿಗೆ ಭೇಟಿ ನೀಡಿದ ನರಸಿಂಹ ಕೋಣೆಮನೆ

0
32
loading...

ಮುಂಡಗೋಡ:- ರಾಜ್ಯ ಸರಕಾರದ ಆದೇಶದ ಮೇರೆಗೆ ಬಡವರಿಗೆ ವಿತರಿಸಬೇಕಾದ ಪಡಿತರ ಗೋದಿಯನ್ನು ತಡೆಹಿಡಿದು ಕಳೆದ ಒಂದು ವರ್ಷದಿಂದ ಗೋದಾಮುಗಳಲ್ಲಿ ದಾಸ್ತಾನಿಟ್ಟು ಗೋದಿಗೆ ಹುಳು ಹಿಡಿದು ಹಾಳಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಸದಸ್ಯ ನರಸಿಂಹ ಕೋಣೆಮನೆ ಆರೋಪಿಸಿದರು.
ಅವರು ಸೋಮವಾರ ಪಟ್ಟಣದ ಟಿ.ಎ.ಪಿ.ಸಿ.ಎಮ್‌.ಎಸ್‌. ಗೋದಾಮಿಗೆ ಭೇಟಿ ನೀಡಿದರು. ಸುಮಾರು 56ಕ್ವಿಂಟಾಲ್‌ 99ಕೆ.ಜಿ. ಗೋದಿಯನ್ನು ದಾಸ್ತಾನಿಟ್ಟು 1 ವರ್ಷದಿಂದ ವಿತರಣೆ ಮಾಡಲಿಲ್ಲ. ಗೋದಿಯಲ್ಲಿ ಹುಳುಗಳು ಸೇರಿಕೊಂಡು ಹಿಟ್ಟಾಗಿ ಪರಿಣಮಿಸಿಬಿಟ್ಟಿದೆ. ಫುಡ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾದಿಂದ ರಾಜ್ಯಕ್ಕೆ ಗೋದಿ ಸರಬರಾಜಾಗುತ್ತದೆ. ರಾಜ್ಯದಲ್ಲಿ ಪಡಿತರ ಅಂಗಡಿಗಳಿಗೆ ವಿತರಿಸುವ ಗುತ್ತಿಗೆಯನ್ನು ಹುಬ್ಬಳ್ಳಿಯ ಎಫ್‌.ಸಿ.ಆಯ್‌. ಕಂಪನಿಗೆ ನೀಡಲಾಗಿದೆ. ಆದರೆ ರಾಜ್ಯ ಸರಕಾರ ಗೋದಿ ವಿತರಣೆ ಮಾಡುವುದನ್ನು ತಡೆ ಹಿಡಿದು ಗೋದಾಮುಗಳಲ್ಲಿ ದಾಸ್ತಾನಿಟ್ಟಿದೆ. 2 ವರ್ಷದಿಂದ ರಾಜ್ಯದಲ್ಲಿ ಬರಗಾಲವಿದ್ದು ಜನ ಕಂಗಾಲಾಗಿದ್ದಾರೆ. ಇದೇ ರೀತಿ ರಾಜ್ಯಾದ್ಯಂತ ಲಕ್ಷಾಂತರ ಕ್ವಿಂಟಾಲ್‌ ಗೋದಿ ಕೊಳೆಯುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೇ ನೆರ ಹೋಣೆ. ಕೇಂದ್ರ ಸರ್ಕಾರ ಕೊಟ್ಟಿರುವುದನ್ನು ರಾಜ್ಯ ಸರ್ಕಾರ ಜನಕ್ಕೆ ಹಂಚದೇ ಜನರನ್ನು ಕತ್ತಲೆಯಲ್ಲಿಟ್ಟು ದುರಾಡಳಿತ ಮಾಡುತ್ತಾ ಇದೆ. ಇದರಿಂದ ಗೋದಿ ಹಾಳಾಗುತ್ತಿದ್ದು, ಸರ್ಕಾರ ಇದನ್ನು ವಾಪಸು ಪಡೆಯಬೇಕು ಅಥವಾ ಬಡವರಿಗೆ ಹಂಚಲು ವ್ಯವಸ್ಥೆ ಮಾಡಬೇಕು ಅದೂ ಸಾಧ್ಯವಾಗದಿದ್ದಲ್ಲಿ ಹರಾಜು ಮಾಡಬೇಕು. ನಾವು ಇಡೀ ಜಿಲ್ಲಾದ್ಯಂತ ಈ ಅಭಿಯಾನ ಪ್ರಾರಂಭಿಸಿದ್ದೇವೆ. ಇದರಲ್ಲಿ ಯಾವ ಯಾವ ಇಲಾಖೆಯವರು ಶಾಮೀಲಾಗಿದ್ದಾರೆ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಬಡ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಾ ಬಿಜೆಪಿ ಅಧ್ಯಕ್ಷ ರಾಮು ನಾಯ್ಕ, ಮುಂಡಗೋಡ ತಾಲೂಕಾ ಬಿಜೆಪಿ ಅಧ್ಯಕ್ಷ ಗುಡ್ಡಪ್ಪಾ ಕಾತೂರ, ಮಹೇಶ ಹೊಸಕೊಪ್ಪ, ಉಮೇಶ ಬಿಜಾಪುರ, ಡಿ.ಜೆ.ಕುಲಕರ್ಣಿ, ಅಶೋಕ ಚಲವಾದಿ, ಚನ್ನಪ್ಪಾ ಹಿರೇಮಠ, ಮಂಜುನಾಥ ವಡ್ಡರ, ಸಂತೋಷ ಸಮ್ಮಸಗಿ ಇದ್ದರು.

loading...