ಗ್ರಾಮಜ್ಯೋತಿ, ಮಾದರಿ ಗ್ರಾಮ ಯೋಜನೆಗೆ 31.12 ಕೋಟಿ: ಶಶಿಕಲಾ ಜೊಲ್ಲೆ

0
24
loading...

ನಿಪ್ಪಾಣಿ: ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಕೇಂದ್ರ ಸರ್ಕಾರದ ಪಂಡಿತ ದೀನ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಮಾದರಿ ವಿದ್ಯುತ್‌ ಗ್ರಾಮ ಯೋಜನೆಯಡಿಯಲ್ಲಿ 31.12 ಕೋಟಿ.ರೂ.ಗಳ ಅನುದಾನ ಮಂಜೂರಾಗಿದ್ದು ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು. ತಾಲೂಕಿನ ಭಿವಶಿಯ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಜತ್ರಾಟ ಗ್ರಾಮದಲ್ಲಿ ಹೊಸದಾಗಿ 33 ಕೆ.ವ್ಹಿ. ವಿದ್ಯುತ್‌ ವಿತರಣಾ ಕೇಂದ್ರ ನಿರ್ಮಾಣ, ಎಲ್‌.ಟಿ. ಮತ್ತು ಎ.ಬಿ. ಕೇಬಲ್‌ ಅಳವಡಿಕೆ ಹಾಗೂ 11 ಕೆ.ವ್ಹಿ. ವ್ಯವಸ್ಥೆ ನಿರ್ಮಾಣಕ್ಕಾಗಿ, 11 ಕೆ.ವ್ಹಿ. ಫಿಡರ್‌ ಪ್ರತ್ಯೇಕಿಸಲು, ಹೊಸ ಪರಿವರ್ತಕಗಳ ಅಳವಡಿಕೆ ಹಾಗೂ ಬೀದಿ ದೀಪಗಳ ಅಳವಡಿಕೆ, ವಿತರಣಾ ಪರಿವರ್ತಕಗಳ ನಿರ್ವಹಣೆಗಾಗಿ ಒಟ್ಟು 14.06 ಕೋಟಿ. ರೂ. ಮಂಜೂರು. ಬಿ.ಪಿ.ಎಲ್‌. ಫಲಾನುಭವಿಗಳ ಮನೆಗಳ ವಿದ್ಯುದ್ದಿಕರಣಕ್ಕಾಗಿ, ಹೊಸ ಮಾಪಕ ಅಳವಡಿಕೆ, ಮಾದರಿ ಗ್ರಾಮ ಯೋಜನೆಯಡಿಯಲ್ಲಿ ಭಿವಶಿÀವಾಡಿ, ಮತ್ತಿವಾಡ, ಗವಾನ ಹಾಗೂ ಬೂದಿಹಾಳ ಗ್ರಾಮಗಳ ಮಾದರಿ ವಿದ್ಯುತ್‌ ಗ್ರಾಮಕ್ಕಾಗಿ 1.19 ಕೋಟಿ.ರೂ.  ಈ ಸಂದರ್ಭದಲ್ಲಿ ನಿಪ್ಪಾಣಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಶಿಂತ್ರೆ, ಜಯವಂತ ಭಾಟಲೆ, ಚಿಕ್ಕೋಡಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ ಸುಸಾಲಟ್ಟಿ, ಸಹಾಯಕ ಕಾರ್ಯ ನಿರ್ವಾಹಣಾಧಿಕಾರಿ ಸಂಜಯ ಸುಖಸಾಗರೆ, ನಿಪ್ಪಾಣಿಯ ಸಹಾಯಕ ಕಾರ್ಯ ನಿರ್ವಾಹಣಾಧಿಕಾರಿ ಅಕ್ಷಯ ಚೌಗುಲೆ, ಎಪಿಎಂಸಿ ಸದಸ್ಯ ರಾಹುಲ ಪಾಟೀಲ, ನಿತೇಶ ಖೋತ. ಜಿ.ಪಂ. ಸದಸ್ಯ ಸಿದ್ದು ನರಾಟೆ, ಹಾಲಸಿದ್ದನಾಥ ಕಾರ್ಖಾನೆಯ ಸಂಚಾಲಕ ಸಮೀತ ಸಾಸಣೆ, ತಾ.ಪಂ. ಸದಸ್ಯ ದತ್ತಾತ್ರೇಯ ವಡಗಾವೆ, ಮಲಗೌಡ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

loading...