ಚನ್ನಮ್ಮ ಕಿತ್ತೂರುಃ ನವರಾತ್ರಿ ನಿಮಿತ್ಯ ಪ್ರವಚನ ಮಂಗಲ ಕಾರ್ಯಕ್ರಮ

ನವರಾತ್ರಿ ನಿಮಿತ್ಯ ಪ್ರವಚನ ಮಂಗಲ ಕಾರ್ಯಕ್ರಮ
ನವರಾತ್ರಿ ನಿಮಿತ್ಯ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಗಣ್ಯರು
loading...

 

ಕನ್ನಡಮ್ಮ ಸುದ್ದಿ, ಚನ್ನಮ್ಮ ಕಿತ್ತೂರು.
ಪ್ರತಿಯೋಂದು ಜೀವಿಯ ಜೀವನದಲ್ಲಿಯೂ ಅನೇಕ ರೀತಿಯ ಏರುಪೇರುಗಳಿದ್ದು ಮಾನಸಿಕ ಒತ್ತಡಕ್ಕೆ ಆ ಜೀವಿ ಸಿಲುಕಿರುತ್ತದೆ ಎಂದು ಕಿನಾವಿವ ಸಂಘದ ಅಧ್ಯಕ್ಷ ಈರಣ್ಣಾ ಮಾರಿಹಾಳ ಹೇಳಿದರು.
ಕೋಟೆಯ ಆವರಣದ ಗ್ರಾಮದೇವಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ಯ ನಡೆದ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಕಷ್ಟದ ಸಮಯದಲ್ಲಿ ಆಧ್ಯಾತ್ಮದ ಮೊರೆ ಹೊಗುವದರಿಂದ ಮಾನಸಿಕ ಒತ್ತಡವು ಕಡಿಮೆಯಾಗಿ ಕಷ್ಟಗಳು ದೂರವಾಗುತ್ತವೆ. ಎಂದರು.
ದೇವರ ಆರಾಧನೆಗೆ ಕೇವಲ ಭಕ್ತಿಯೊಂದಿದ್ದರೆ ಮುಕ್ತಿಯ ದಾರಿಯು ತಾನಾಗೀಯೆ ತೆರೆದುಕೊಳ್ಳುತ್ತದೆ. ಅದರಲ್ಲೂ ವಿಷೇಶವಾಗಿ ದೇವಿ ಆರಾಧನೆಯಿಂದ ಹಾಗೂ ಆ ಶಕ್ತಿ ಮಾತೆಯ ಪ್ರವಚನ ಆಲಿಸುವದರಿಂದ ಮನುಷ್ಯನಲ್ಲಿರುವ ಅಹಂ ಭಾವನೆ ತೊರೆದು ಎಲ್ಲರನ್ನೂ ಸಮವಾಗಿ ಕಾಣುವ ಹಾಗೂ ಎಲ್ಲರ ಹಿತವನ್ನು ಬಯಸುವ ಶಕ್ತಿ ಒದಗಿ ಬರುತ್ತದೆ ಎಂದರು.
ಕಿನಾಲಿಂವಿವ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ ಮಾತನಾಡಿ, ಈ ಹಿಂದೆ ಮಹಾತ್ಮರು ದೇವರನ್ನು ಅನುಷ್ಠಾನಗೊಳಿಸಿ ಪೂಜಿಸಲು ಕಾರಣ ಮನುಷ್ಯನ ಮನದಲ್ಲಿ ಭಯ, ಭಕ್ತಿ ಹುಟ್ಟಿಸಿ ಸತ್ಯದ ಹಾಗೂ ಧರ್ಮದ ದಾರಿಯಲ್ಲಿ ಸಮಾಜವನ್ನು ಕೊಂಡ್ಯೊಯುವದಾಗಿದ್ದು ದೇವರನ್ನು ಪೂಜಿಸುವ ಕಾರಣದಿಂದ ಋಣಾತ್ಮಕ ಶಕ್ತಿಗಳ ಆಟಾಟೊಪಕ್ಕೆ ಕಡಿವಾಣ ಹಾಕಿ, ಪ್ರತಿಯೊಂದು ಜೀವಿಯ ಜೀವನದಲ್ಲಿಯೂ ಒಳಿತನ್ನು ಬಯಸುವ ಹಾಗೂ ಸುಖಮಯ ಜೀವನ ಸಾಗಿಸಲು ಇದು ಸಹಕಾರಿಯಾಗಿದೆ ಈ ನಿಟ್ಟಿನಲ್ಲಿ ಹಬ್ಬ ಹರಿದಿನಗಳಲ್ಲಿ ಸಮಭಾವನೆಯಿಂದ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಗಂದಿಗವಾಡ ಮೃತ್ಯುಂಜಯಸ್ವಾಮಿ ಹಿರೇಮಠ ವಹಿಸಿದ್ದರು, ಪುರಾಣಿಕರಾದ ಕುಮಾರಿ ತೇಜಸ್ವಿನಿ ಹಿರೇಮಠರನ್ನು ಹಾಗೂ ಸಂಗೀತ ಸೇವೆ ಸಲ್ಲಿಸಿದ ಈಶ್ವರ ಗಡಿಬಿಡಿ ಹಾಗೂ ಪ್ರಹ್ಲಾದ ಜೋಷಿಯವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಮಾಜಿ ಕಸಾಪ ತಾಲೂಕಾಧ್ಯಕ್ಷ ಬಸವರಾಜ ಕುಪ್ಪಸಗೌಡರ ಮಾತನಾಡಿದರು. ಕಿನಾವಿವ ಸಂಘದ ಉಪಾಧ್ಯಕ್ಷರಾದ ಯು.ಎಮ್.ಹಿರೇಮಠ, ವಿ.ಆರ್.ಶೆಟ್ಟರ, ನಿರ್ದೇಶಕರಾದ ನಿಜಲಿಂಗಯ್ಯಾ ಹಿರೇಮಠ, ಜೆ.ಎಸ್.ಬಿಕ್ಕಣ್ಣವರ, ಯು.ಡಿ.ಭಾರತಿ, ಡಿ.ಎಲ್.ಪಾಟೀಲ, ಮಾಜಿ ಜಿಪಂ ಉಪಾಧ್ಯಕ್ಷ ಯಲ್ಲಪ್ಪ ವಕ್ಕುಂದ, ಶಿವಾನಂದ ಜಕಾತಿ, ದಿನೇಶ ವಳಸಂಗ, ಎಸ್.ಡಿ.ಹಿರೇಮಠ, ಸುರೇಶ ಸೂರ್ಯವಂಶಿ, ಚಂಬಣ್ಣಾ ಶಿಂಗನಳ್ಳಿ, ಅಜ್ಜಪ್ಪ ಪತ್ತಾರ, ಈಶ್ವರ ಕಲ್ಮಠ, ಮಲ್ಲಿಕಾರ್ಜುನ ದೊಡಮನಿ ಸೇರಿದಂತೆ ನೂರಾರು ಭಕ್ತರು ಪಾಲ್ಗೋಂಡಿದ್ದರು.

loading...