ಚೆಂಡು ಹೂವಿಗೂ ಬಂತು ಭಾರಿ ಬೇಡಿಕೆ

0
30
loading...

ಬೈಲಹೊಂಗಲ: ಎಫ್‌.ಎಸ್‌.ಸಿದ್ದನಗೌಡರ ಮಾನವರಿಗಷ್ಟೆ ಅಲ್ಲದೆ ದೇವರಿಗೂ ಪ್ರೀತಿಪಾತ್ರವಾದ ಹೂ, ಕೇವಲ ಪೂಜೆ, ಜಾತ್ರೆ, ಹಬ್ಬ, ಇನ್ನಿತರ ಶುಭ ಕಾರ್ಯಗಳಿಗೆ ಅಷ್ಟೇ ಸೀಮಿತವಾಗಿದ್ದ ಹೂವಿನ ಕೃಷಿ ಇಂದು ಔಷದಿ ಮತ್ತು ಬಣ್ಣಗಳ ತಯಾರಿಕೆಗೆ ಅತ್ಯಂತ ಅವಶ್ಯಕವಾಗಿದ್ದು ಚಂಡು ಹೂವಿನ ಬೆಳೆಗೆ ತುಂಬಾ ಬೇಡಿಕೆ ಕಂಡುಬರುತ್ತಿದೆ. ಕೇರಳ ಮೂಲದ ಎ.ವಿ.ಟಿ ಕಂಪನಿ ಪ್ರತಿನಿಧಿಗಳು ಬೈಲಹೊಂಗಲ ತಾಲೂಕಿನಲ್ಲಿ ಸುಮಾರು 150 ಎಕರೆ ಜಮೀನಿನಲ್ಲಿ ತಮ್ಮ ಕಂಪನಿಯಲ್ಲಿ ತಯಾರಿಸುವ ಔಷಧಿ ಮತ್ತು ಬಣ್ಣಗಳಿಗಾಗಿ ನೇರವಾಗಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಚಂಡು ಹೂವಿನ ಬೆಳೆಯನ್ನು ಬೆಳೆಸುತ್ತಿದ್ದಾರೆ.
ಸಾವಯವ ಬೆಳೆ : ಸಾವಯವ ಗೊಬ್ಬರದಿಂದ ಬೆಳೆಯುವುದರಿಂದ ಔಷಧಿ ತಯಾರಿಕಾ ಕಂಪನಿಗಳು ಚಂಡಹೂವಿನ ಬೆಳೆಗೆ ಭಾರೀ ಬೇಡಿಕೆ ನೀಡುತ್ತಿದ್ದಾರೆ ಕಂಪನಿಯವರು ಖುದ್ದಾಗಿ ರೈತರ ಜಮೀನುಗಳಿಗೆ ಬಂದು ನಿಲ್ಲುವುದರ ಜೋತೆಗೆ ಬಣ್ಣಗಳ ತಯಾರಿಕಾ ಕಂಪನಿಗಳು ರೈತರ ಬಾಗಿಲಿಗೆ ಬಂದು ಚಂಡು ಹೂವಿನ ಮಹತ್ವ ಅದರಿಂದ ಬರುವ ಲಾಭ ವಿವರಿಸುತ್ತ ನೀರಾವರಿ ಹೊಂದಿರುವ ರೈತನ ಭೂಮಿಯನ್ನು ಆಯ್ದುಕೊಂಡು ಬೀಜ, ಗೊಬ್ಬರ, ಔಷಧಿಗಳನ್ನು ನೀಡುತ್ತಿದ್ದಾರೆ.
ಭೂಮಿಗೆ ಸಿದ್ದತೆ ಸಸಿ ತಯಾರಿಕೆ : ಭೂಮಿಯನ್ನು ನೇಗಿಲನಿಂದ ಉಳಿಮೆ ಮಾಡಿ ನಾಲ್ಕು ಅಡಿಗೆ ಒಂದು ಸಾಲುಗಳಂತೆ ಹದಗೊಳಿಸಿ ಸುಮಾರು ಎಂಟು ಇಂಚಿಗೆ ಒಂದು ಗಿಡ ನೆಡಲಾಗುವುದು. ಕಂಪನಿಯವರು ನೀಡಿದ ಬೀಜಗಳನ್ನು ಪಲವತ್ತಾದ ಮಣ್ಣಿನಲ್ಲಿ ಸಾವಯವ ಗೊಬ್ಬರ ಮಿಶ್ರಣ ಮಾಡಿ ಚಿಕ್ಕ ಚಿಕ್ಕ ಮಡಿಗಳಲ್ಲಿ ಬೀಜ ಹಾಕಿ ಜಾರಿಯಿಂದ ಸೂಕ್ಷ್ಮರೀತಿಯಲ್ಲಿ ನೀರು ಹಣಿಸಿವ ಮುಖಾಂತರ ಸಸಿ ಬೆಳೆಸಲಾಗುವುದು. ಹೂವಿನ ಬೆಳೆಯುವ ವಿಧಾನ : ರೈತರು ಚಂಡು ಹೂವಿನ ಬೀಜಗಳು ಸಸಿ ಹಾಕಿ ನಂತರ ಹೊಲದಲ್ಲಿ ನಾಟಿ ಮಾಡಿ ಸರಿಯಾದ ಪ್ರಮಾಣದಲ್ಲಿ ಸಾವಯವ ಗೊಬ್ಬರ, ಔಷಧಿ ಮತು ಬೆಳೆಸಲು ಸೂಕ್ತ ಸಲಹೆ ನೀಡಿ ಬೆಳೆಯ ಮೆಲ್ವೀಚಾರಣೆಯನ್ನು ಕಂಪನಿ ಪ್ರತಿನಿಧಿಗಳೆ ಕುದ್ದಾಗಿ ನೂಡಿಕೊಳ್ಳುತ್ತಿದ್ದಾರೆ. ನಂತರ ಚಂಡ ಹೂವಿನ ಸಸಿಗಳನ್ನು 3 ರಿಂದ 4 ಅಡಿಯ ಸಾಲುಗಳಲ್ಲಿ 2 ಅಡಿಗೆ ಒಂದರಂತೆ ಒಂದು ಎಕರೆಯಲ್ಲಿ ಸುಮಾರು 6,500 ದಿಂದ 8,000 ಗಿಡಗಳ ನೆಡಬಹುದು.

loading...