ಚೆಕ್‌ ಡ್ಯಾಮ ನಿರ್ಮಾಣಕ್ಕೆ ಭೂಮಿ ಪೂಜೆ 

0
29
loading...

ಬೈಲಹೊಂಗಲ: ಸಮೀಪದ ಆನಿಗೋಳ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಸ್‌.ಸಿ.ಪಿ/ಟಿ.ಎಸ್‌.ಪಿ ಯೋಜನೆಯಡಿ ಮಂಜೂರಾದ ಅಂದಾಜು ರೂ. 20.00 ಲಕ್ಷ ವೆಚ್ಚದ ಸ್ಥಳೀಯ ಹಳ್ಳಕ್ಕೆ ಚೆಕ್‌ ಡ್ಯಾಮ ನಿರ್ಮಾಣ ಹಾಗೂ 2017-18 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಮಂಜೂರಾದ ಅಂದಾಜು ರೂ. 5.00 ವೆಚ್ಚದ ಶ್ರೀ ಭಗೀರಥ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳ ಭೂಮಿ ಪೂಜೆಯನ್ನು ಶಾಸಕ ಡಾ. ವಿಶ್ವನಾಥ ಈ. ಪಾಟೀಲರು ನೇರವೇರಿಸಿದರು.  ಈ ಸಂದರ್ಭದಲ್ಲಿ ಗುರುನಾಥ ಹೊಂಗಲ, ಎ.ಪಿ.ಎಮ್‌.ಸಿ ಸದಸ್ಯರಾದ ಬಸವರಾಜ ಭಜಂತ್ರಿ, ತಾಲೂಕ ಪಂಚಾಯತ ಸದಸ್ಯರಾದ ನೀಲವ್ವಾ ಫಕ್ಕೀರಣ್ಣವರ, ಮಲ್ಲೇಶ ಆದೆನ್ನವರ, ಈರಣ್ಣ ಹೊಸಮನಿ, ಸಿದ್ದನಗೌಡ ಸಣ್ಣನಾಯ್ಕರ, ಡಾ. ಮಹಾಂತೇಶ ಪೂಜೇರಿ, ರಮೇಶ ಪಾಟೀಲ, ಚನ್ನಯ್ಯ ಹುಗ್ಗಿ, ನಾಗೇಶ ಫಕ್ಕಿರಣ್ಣವರ, ಮಂಜು ಮಳಗಿ, ಆನಂದ ಮಳಗಿ, ಎಮ್‌. ಆರ್‌ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...