ಜಗತ್ತಿಗೆ ರಾಮಾಯಣ ಅರ್ಪಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ: ಜಾರಕಿಹೊಳಿ

0
25
loading...

ಗೋಕಾಕ: ಜಗತ್ತಿಗೆ ರಾಮಾಯಣ ಅರ್ಪಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರದಂದು ಭೀಮವ್ವಾ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್‌ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ವಾಲ್ಮೀಕಿ ಜಯಂತಿ ಆಚರಿಸುವ ಜೊತೆಗೆ ಅವರ ವಿಚಾರಧಾರೆಗಳು ಜೊತೆಯಾಗಿವೆ. ಇವರೊಬ್ಬ ಆದಿಕವಿಯಾಗಿದ್ದರು. ಶ್ರೇಷ್ಠ ದಾರ್ಶನಿಕರಾಗಿದ್ದರೆ.
ರಾಮಾಯಣದಲ್ಲಿ ಜನ ತಮ್ಮ ಬಾಳನ್ನು ನೋಡಿಕೊಳ್ಳಬೇಕು. ಇಲ್ಲಿ ಪ್ರತಿಯೊಬ್ಬರಿಗೂ ಒಂದು ಪಾಠವಿದೆ. ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜಿಕ ಗುಣಗಳನ್ನು ಪ್ರತಿಪಾದಿಸುವ ದಾರಿದೀಪವಾಗಿ ಜ್ಞಾನದ ದಾರಿ ತೋರಿಸುತ್ತದೆ. ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿ ಜಗತ್ತಿಗೆ ನೀಡಿದ ಕೀರ್ತಿಗೆ ಮಹರ್ಷಿ ವಾಲ್ಮೀಕಿ ಪಾತ್ರರಾಗಿದ್ದಾರೆಂದು ಹೇಳಿದರು.
ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಆರ್‌ ಎಸ್‌. ಬೆಣಚಿನಮರಡಿ, ಮಾಜಿ ನಗರಾಧ್ಯಕ್ಷ ಎಸ್‌ ಎ. ಕೋತವಾಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಗಣ್ಯ ಉದ್ಯಮಿ ಬಸವರಾಜ ಹತ್ತರಕಿ, ನಗರಸೇವಕ ಪರಶುರಾಮ ಭಗತ, ಎನ್‌ಎಸ್‌ಎಫ್‌ ಅತಿಥಿ ಗೃಹದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಬಿಎಲ್‌ಜೆ ಟ್ರಸ್ಟಿನ ಮಂಜು ಪೂಜೇರ, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂತೋಷ ಜಾರಕಿಹೊಳಿ ಅವರು ಮಹರ್ಷಿ ವಾಲ್ಮೀಕಿ ಅವರ ಜಯಂತಿ ನಿಮಿತ್ಯ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲಗಳನ್ನು ವಿತರಿಸಿದರು.

loading...