ಜನಮನ ಸೆಳೆದ ಬುದ್ದಿಮಾಂದ್ಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

0
21
loading...

ನಿಪ್ಪಾಣಿ: ಸಿದ್ಧೇಶ್ವರ ಮಹಾಸ್ವಾಮಿಜೀಯವರ ಆಧ್ಯಾತ್ಮಿಕ ಪ್ರವಚನದ ನಿಮಿತ್ಯ ಭಿವಶಿಯ ಫಾರ್ಮಹೌಸನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಯಕ್ಸಂಬಾದ ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, ಮಾರ್ತಾಂಡನ ಹಾಗೂ ಸಾಯಿಬಾಬಾರವರ ನೃತ್ಯ ಪ್ರದರ್ಶನ ಜರುಗಿದವು. ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಮಾರ್ತಾಂಡನ ವೇಶದಲ್ಲಿ ಸಹಭಾಗಿಯಾಗಿ ನೋಡುಗರ ಗಮನ ಸೆಳೆದರು. ಈ ಸಂದರ್ಭದಲ್ಲಿ ವ್ಯಸನಮುಕ್ತಿ ವಿಷಯದ ಕುರಿತಾಗಿ ಚಿಂತನ ಕಾರ್ಯಕ್ರಮ ಜರುಗಿತು. ಇದರಲ್ಲಿ ಸುಮಾರು ಜನ ವ್ಯಸನದಿಂದ ಮನುಷ್ಯನ ಶರೀರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ಈ ಸಂದರ್ಭದಲ್ಲಿ ನಿಪ್ಪಾಣಿಯ ಸಮಾಧಿ ಮಠದ ಶ್ರೀ ಪ್ರಾಣಲಿಂಗ ಮಹಾಸ್ವಾಮಿಜೀ, ಶ್ರೀ. ಶ್ರದ್ಧಾನಂದ ಮಹಾಸ್ವಾಮಿಜೀ, ಶಾಸಕಿ ಶಶಿಕಲಾ ಜೊಲ್ಲೆ, ಸಹಕಾರ ರತ್ನ ಅಣ್ಣಾಸಾಹೇಬ ಜೊಲ್ಲೆ, ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಗಣಪತರಾವ ಪಾಟೀಲ, ಸಂಚಾಲಕರಾದ ಇಂದ್ರಜೀತ ಪಾಟೀಲ, ಶರದಚಂದ್ರ ಫಾಟಕ, ಶ್ರೇಣಿಕ ಪಾಟೀಲ, ಎಸ್‌ ಎಸ್‌ ಢವಣೆ, ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಮುಂತಾದ ಗಣ್ಯಮಾನ್ಯರು ಭಕ್ತಾದಿಗಳು ಉಪಸ್ಥಿತರಿದ್ದರು. ದಿನಾಂಕ 13 ರಂದು ಶುಕ್ರವಾರ ಬೆಳವಿಯ ಡಿ.ಆರ್‌. ನದಾಫ್‌ ಅವರಿಂದ ಮೂಗಿನಿಂದ ಕೊಳಲು ವಾದನ ಹಾಗೂ ಗೋಕಾಕನ ಬಸವರಾಜ ಹಿರೇಮಠ ಇವರಿಂದ ಜಾನಪದ ಗಾಯನ ಕಾರ್ಯಕ್ರಮಗಳು ನಡೆಯಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಲು ಪ್ರವಚನದ ಆಯೋಜಕರು ತಿಳಿಸಿದ್ದಾರೆ.

loading...