ಜನೇವರಿಯಿಂದ ನಿಪ್ಪಾಣಿ ನಗರಕ್ಕೆ ನಿರಂತರ ನೀರು ಪೂರೈಕೆ

0
28
loading...

ನಿಪ್ಪಾಣಿ: ನಿಪ್ಪಾಣಿ ನಗರಕ್ಕೆ ಜನೇವರಿ 2018ರಿಂದ 24/7 ನೀರು ಪೊರೈಕೆ ಆರಂಭಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಹೇಳಿದರು. ಪತ್ರ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಇನ್ನುಳಿದಿರುವ 30 ಕಿ.ಮೀ ಪೈಪ್‌ಲೈನ್‌ ಕಾಮಗಾರಿಯನ್ನು ಡಿ.15 ರವರೆಗೆ ಪೂರ್ಣಗೊಳಿಸಲಾಗುವುದು ಎಂದರು.ಈ ಬಗ್ಗೆ ಬೆಳಗಾವಿಯಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ಕರ್ನಾಟಕ ನೀರು ಪೊರೈಕೆ ನಿಗಮದ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಅವರು ಗುತ್ತಿಗೆದಾರರಿಗೆ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ. 2008-09ರಲ್ಲಿ 24 ಗಂಟೆ ನೀರು ಪೊರೈಕೆ ಕಾಮಗಾರಿಯನ್ನು ತಾಪಿ ಕಂಪನಿ ಆರಂಭಿಸಿತ್ತು. 4 ವರ್ಷಗಳಾದರೂ ತಾಪಿ ಕಂಪನಿ ವತಿಯಿಂದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಲಿಲ್ಲ.ಲಹೀಗಾಗಿ ಸರಕಾರ ಕಂಪನಿ ವಿಕ್ರಮ ಜರುಗಿಸಿ ಗುತ್ತಿಗೆಯನ್ನು ರದ್ದುಗೊಳಿಸಿತು. ತಾಪಿ ಕಂಪನಿ ಸರಕಾರದ ವಿರುದ್ಧ ಕೋರ್ಟ ಮೇಟ್ಟಿಲೇರಿದ್ದರಿಂದ ಮತ್ತೆ ಒಂದು ವರ್ಷ ವಿಳಂಬಗೊಂಡಿತು. ಸದರಿ ಕಾಮಗಾರಿಯನ್ನು ಆರ್‌.ಡಿ.ಕಿತ್ತೂರ ಅವರಿಗೆ ವಹಿಸಲಾಗಿದೆ.11 ಕೋಟಿ ರೂ.ಗಳ ನಿಧಿ ಮಂಜೂರು ಮಾಡಲಾಗಿದೆ. ತದನಂತರ ಜೈನ್‌ ಇರಿಗೇಶನ್‌ ಅವರಿಗೆ ಕಾಮಗಾರಿ ನೀಡಲಾಯಿತು. ಉಪಬಡಾವಣೆಗಳಲ್ಲಿ ಕಾಮಗಾರಿ ಸರ್ವೆ ಕಾರ್ಯ ಮಾಡದೇ ಇರುವುದರಿಂದ ಇನ್ನೂ 30 ಕಿಮೀ ಪೈಪ್‌ಲೈನ್‌ ಕಾಮಗಾರಿ ಬಾಕಿ ಉಳಿದಿದೆ. 6 ಸಾವಿರ ನಳ ಜೋಡಣೆ ಮಾಡುವುದು ಬಾಕಿ ಉಳಿದಿದೆ. ಬೆಳಗಾವಿ ನಾಕಾದಲ್ಲಿಯ 20 ಲಕ್ಷ ಲೀ. ನೀರಿನ ಟ್ಯಾಂಕ್‌ ಕಾಮಗಾರಿ ಪೂರ್ಣತ್ವಗೊಳ್ಳಲಿದೆ ಎಂದರು. ಬೀರೋಬಾ ಮಾಳ, ಜವಾಹರ ಜಲಾಶಯದ ಬಳಿಯ ನೀರಿನ ಟ್ಯಾಂಕ್‌ಗಳ ಕಾಮಗಾರಿ ಪೂರ್ಣಗೊಂಡಿವೆ. ಸತತ 8 ವರ್ಷಗಳ ಕಾಲ ನಿಪ್ಪಾಣಿ ನಾಗರೀಕರು ಅತ್ಯಂತ ತಾಳ್ಮೆ ವಹಿಸಿಕೊಂಡು ಕಾಮಗಾರಿ ಪೂರ್ಣಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಸಂಭಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.ಶೀಘ್ರದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.ನಗರಸಭೆ ಸದಸ್ಯರಾದ ದಿಲೀಪ ಪಠಾಡೆ,ಧನಾಜಿ ನಿರ್ಮಳೆ,ಅನೀಸ ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...