ಜೂಜಾಟ, ಮಟಕಾಡುತ್ತಿದ್ದ: ಎಂಟು ಜನ ಸೆರೆ

0
16
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ವಿವಿದೆಡೆಗಳಲ್ಲಿ ಜೂಜಾಟ, ಮಟಕಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಎಂಟು ಜನರನ್ನು ಬಂಧಿಸಿದ್ದಾರೆ.
ಚಿಕ್ಕೋಡಿಯ ಮೋಹನ ಬೆಳಕೂಡ ಮತ್ತು ಮೂವರು, ರಾಮದುರ್ಗದ ರಾಜೀವ ಮಲ್ಲಪ್ಪ ಜೋಗಿ, ಬಸರಗಿ ಗ್ರಾಮದ ಪಕೀರಪ್ಪಾ ಕೀಲಿ, ಮುಳ್ಳೂರ ಗ್ರಾಮದ ಚನ್ನಪ್ಪ ಗುದ್ದಿ ಮತ್ತು ಯರಗುದ್ದಿ ಗ್ರಾಮದ ಬಾಳಯ್ಯಾ ಪೂಜೇರಿ ಬಂಧಿತರು. ಬಂಧಿತರಿಂದ 17,969 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಚಿಕ್ಕೋಡಿ, ರಾಮದುರ್ಗ, ಸವದತ್ತಿ ಮತ್ತು ನೇಸರಗಿ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...