ಡಿಗ್ಗೇಗಾಳಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

0
28
loading...

ಖಾನಾಪುರ: ತಾಲೂಕಿನ ಲೋಂಡಾ ಜಿಪಂ ಕ್ಷೇತ್ರದ ಡಿಗ್ಗೇಗಾಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶನಿವಾರ ಬಿಜೆಪಿ ಮುಖಂಡ ಬಾಬುರಾವ್‌ ದೇಸಾಯಿ ಭೂಮಿಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಗ್ಗೇಗಾಳಿ ರಸ್ತೆ ಸುಧಾರಣೆಗೆ ಜಿಪಂ ವತಿಯಿಂದ 4 ಲಕ್ಷ ಅನುದಾನ ಮಂಜೂರಾಗಿದ್ದು, ಇದೇ ಮಾದರಿಯಲ್ಲಿ ಲೋಂಡಾ ಜಿಪಂ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿರುವುದಾಗಿ ಹೇಳಿದರು. ಅಶೋಕ ನೇಸರೇಕರ, ಪ್ರದೀಪ ಪರೀಟ, ಲಕ್ಷ್ಮಣ ಗುರವ ಸೇರಿದಂತೆ ಡಿಗ್ಗೇಗಾಳಿ ಗ್ರಾಮಸ್ಥರು ಇದ್ದರು.

loading...