ಡಿಸಿ ಸೂಚನೆಗೆ ಬೆಲೆ ನೀಡದ ಪೊಲೀಸ್ ಇಲಾಖೆ

0
21
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ನಗರದಲ್ಲಿ ಅನಧಿಕೃತ ಆಟೋಗಳ ಸಂಖ್ಯೆಗಳಂತೆ ಅನಧಿಕೃತ ಆಟೋ ನಿಲ್ದಾಣಗಳು ದಿನದಿಂದ ದಿನಕ್ಕೆ ನಗರದಲ್ಲಿ ಎಲ್ಲಿ ಬೇಕಾದರು ಹುಟ್ಟಿಕೊಳ್ಳುತ್ತಿವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ತಮ್ಮಗೆ ಯಾವುದೋ ಸಂಬಂಧವಿಲ್ಲದಂತೆ ಕಣ್ಣು ಮುಳಚಿ ಕುಳಿತುಕೊಂಡಿರುವುದು ಮಾತ್ರ ವಿಪರ್ಯಾಸವಾಗಿದೆ.
ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಅಂಡರ್ ಪಾಸ್ ಅಕ್ಕ, ಪಕ್ಕ ಕಳೆದ ಅನೇಕ ದಿನಗಳಿಂದ ಹತ್ತಾರು ಆಟೋಗಳನ್ನು ನಿಲ್ಲಿಸಿಕೊಂಡು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಡಿಸಿಯವರ ಸೂಚನೆಗೆ ಪೊಲೀಸ್ ಇಲಾಖೆ ಬೆಲೆ ನೀಡಿರುವ ಹಾಗೇ ಕಾಣುತ್ತಿಲ್ಲ ಎಂದು ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಡಿಸಿಯವರ ಸೂಚನೆಗೆ ಪೊಲೀಸ್ ಇಲಾಖೆ ಬೆಲೆ ನೀಡಿದ್ದರೆ ಇಂದು ಆಟೋ ಚಾಲಕರು ಅನಧಿಕೃತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಟೋ ನಿಲ್ಲಿಸಿಕೊಂಡು ನಿಂತಿರುವ ದೃಶ್ಯ ಕಾಣುತ್ತಿರಲ್ಲಿಲ್ಲ ಎಂಬುಂದಂತು ಸತ್ಯ.

loading...