ತವರಿಗೆ ಮರಳಿದ ಆಸೀಸ್ ನಾಯಕ

0
16
loading...

ರಾಂಚಿ:- ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಸೋಲಿಗೆ ಟಿ-20 ಸರಣಿ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ.
ಇಂಡೋ-ಆಸೀಸ್ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ-20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯಕ್ಕೂ ಮೊದಲೇ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಭುಜಕ್ಕೆ ಗಾಯ ಮಾಡಿಕೊಂಡಿದ್ದು, ಸರಣಿಯಿಂದಲೇ ಹೊರಗುಳಿದಿದ್ದಾರೆ.
ಇಂದು ಅಭ್ಯಾಸದ ವೇಳೆ ಸ್ಟೀವ್ ಸ್ಮಿತ್ ತಮ್ಮ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ವೈದ್ಯ ರಿಚರ್ಡ್ ಸಾ ಹೇಳಿದ್ದಾರೆ. ಸ್ಮಿತ್ ಸ್ಥಾನವನ್ನು ಮಾರ್ಕಸ್ ಸ್ಟೋಯಿನಿಸ್ ತುಂಬವು ಸಾಧ್ಯತೆ ಇದೆ. ಆಸೀಸ್ ತಂಡವನ್ನು ಆರಂಭಿಕ ಆಟಗಾರ, ಉಪ ನಾಯಕ ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

loading...