ತಾಜ್ ಮಹಲ್‍ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ

0
17
loading...

ಆಗ್ರಾ:- ವಿವಾದದ ನಡುವೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದಾರೆ.
ಸ್ವಚ್ಛಭಾರತ ಅಭಿಯಾನದ ನಿಮಿತ್ತ ತಾಜ್ ಮಹಲ್‍ನಲ್ಲಿ ಉತ್ತರ ಪ್ರದೇಶ ಸರ್ಕಾರ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದು, ತಾಜ್ ಮಹಲ್‍ನ ಪಶ್ಚಿಮ ದ್ವಾರದಲ್ಲಿ ಕಸ ಗುಡಿಸಲಿದ್ದಾರೆ. ಸಿಎಂ ಆದ ಬಳಿಕ ಅದರಲ್ಲೂ ಪ್ರಮುಖವಾಗಿ ತಾಜ್ ಮಹಲ್ ಕುರಿತ ವಿವಾದಗಳು ಭುಗಿಲೆದ್ದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಯೋಗಿ ಆದಿತ್ಯನಾಥ್ 17ನೇ ಶತಮಾನದ ಐತಿಹಾಸಿಕ ಕಟ್ಟಡ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ.
ಇಂದಿನ ಭೇಟಿ ಸಂದರ್ಭದಲ್ಲಿ ಸಿಎಂ ಯೋದಿ ಆದಿತ್ಯನಾಥ್ ಅವರು ತಾಜ್ ಮಹಲ್‍ನ ಒಳಗೆ ಪ್ರವೇಶ ಮಾಡಲಿದ್ದು, ತಾಜ್ ಮಹಲ್‍ನ ವಿವಿಧ ಮೂಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ಶಹಜಹಾನ್ ಸಮಾಧಿ, ಮುಮ್ತಾಜ್ ಮಹಲ್, ಶಹಜಹಾನ್ ಪಾರ್ಕ್ ಗೂ ಯೋಗಿ ಭೇಟಿ ನೀಡಲಿದ್ದಾರೆ. ಕೇವಲ ಭೇಟಿ ಮಾತ್ರವಲ್ಲದೇ ಐತಿಹಾಸಿಕ ಕಟ್ಟದ ಒಳ ಹಾಗೂ ಹೊರಗಿನ ಪ್ರದೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸಲಿದ್ದಾರೆ.

loading...