ದನದ ಕೊಟ್ಟಿಗೆಗೆ ಬೆಂಕಿ: 60 ಸಾವಿರ ಮೌಲ್ಯದ ದವಸ ಧಾನ್ಯಗಳು ನಾಶ

0
33
loading...

 ಕನ್ನಡಮ್ಮ ಸುದ್ದಿ-ಬೆಳಗಾವಿ: ದನದ ಕೊಟ್ಟಿಗೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಶರ್ಕಿಟ್‍ನಿಂದ ಬೆಂಕಿ ತಗುಲಿದ ಪರಿಣಾಮ ಸುಮಾರು 60 ಸಾವಿರ ಮೌಲ್ಯದ ದವಸ ಧಾನ್ಯಗಳು ನಾಶವಾದ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ನಿಲಜಿ ಗ್ರಾಮದ ತಾನಾಜಿ ಗಲ್ಲಿಯ ನಿವಾಸಿ ವಸಂತ ಯಲ್ಲಪ್ಪ ಪಾಟೀಲ ಎಂಬುವರ ಮನೆಯ ಹಿಂದೆ ದನದ ಕೊಟ್ಟಗಿಯಲ್ಲಿ ಬೆಳಿಗ್ಗೆ ಆಕಸ್ಮಿಕವಾಗಿ ಶಾರ್ಟ್ ಶರ್ಕಿಟ್‍ನಿಂದ ಬೆಂಕಿ ತಗುಲಿದೆ. ತಕ್ಷಣ ಅಗ್ನೀ ಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿಯೇ 15 ಚೀಲ ಭತ್ತ, 1 ಚೀಲ ಜೋಳ,1 ಚೀಲ ಚೆನ್ನಂಗಿ ಕಾಳು ಸೇರಿದಂತೆ ಕೃಷಿ ಉಪಕರಣಗಳ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮಾರಿಹಾಳ ಠಾಣೆಯಲ್ಲಿ ಪೊಲೀಸ್‍ರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

loading...